ಅರುಣಾಚಲ ಪ್ರದೇಶದಲ್ಲಿ ಹೆಲಿಕಾಪ್ಟರ್ ಅಪಘಾತ: ವಿವಾಹ ನಿಶ್ಚಯಗೊಂಡಿದ್ದ ವೀರ ಯೋಧ ಮೇಜರ್ ಮುಸ್ತಫಾ ಹುತಾತ್ಮ
ಅರುಣಾಚಲ ಪ್ರದೇಶ: ಅರುಣಾಚಲ ಪ್ರದೇಶದಲ್ಲಿ ಸಂಭವಿಸಿದ ಸೇನಾ ಹೆಲಿಕಾಪ್ಟರ್ ಪತನದಲ್ಲಿ ಸಾವನ್ನಪ್ಪಿದ ಐವರು ಸೇನಾ ಸಿಬ್ಬಂದಿಗಳ ಪೈಕಿ ಮೇಜರ್ ಮುಸ್ತಫಾ ಬೋಹರಾ ಸೇರಿದ್ದು, ಉದಯಪುರದ ಮೇಜರ್ ಮುಸ್ತಫಾ ಬೋಹರಾ ಅವರ ಕುಟುಂಬದಲ್ಲಿ ಸೂತಕದ ಛಾಯೆ ಆವರಿಸಿದೆ.
ಅರುಣಾಚಲ ಪ್ರದೇಶದ ಸಿಯಾಂಗ್‌ನಲ್ಲಿ ಭಾರತೀಯ ಸೇನೆಯ ಹೆಲಿಕಾಪ್ಟರ್ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಐವರು ಸೈನಿಕರಲ್ಲಿ ಬೋಹರಾ ಕೂಡ ಸೇರಿದ್ದಾರೆ.
ವಿವಾಹ ನಿಶ್ಚಯಗೊಂಡಿದ್ದ ವೀರ ಯೋಧ ಮೇಜರ್ ಮುಸ್ತಫಾ ಹೆಲಿಕಾಪ್ಟರ್ ಅಪಘಾತದಲ್ಲಿ ಹುತಾತ್ಮರಾಗಿರುವುದು ಮದುವೆಯ ತಯಾರಿಯಲ್ಲಿದ್ದ ಮನೆಯಲ್ಲಿ ದುಃಖ ಮುಗಿಲು ಮುಟ್ಟಿದೆ.