ರಾಷ್ಟ್ರೀಯ

ಅರುಣಾಚಲ ಪ್ರದೇಶದಲ್ಲಿ ಹೆಲಿಕಾಪ್ಟರ್‌ ಪತನ: ಕೇರಳದ ಯೋಧ ಹುತಾತ್ಮ: ಹುಟ್ಟೂರಿನಲ್ಲಿ ಸರಕಾರಿ ಗೌರವಗಳೊಂದಿಗೆ ಅಂತಿಮ ನಮನ



ಇಟಾನಗರ: ಅರುಣಾಚಲ ಪ್ರದೇಶದ ಅಪ್ಪರ್‌ ಸಿಯಾಂಗ್‌ ಜಿಲ್ಲೆಯಲ್ಲಿ ಶುಕ್ರವಾರ ಭೂಸೇನೆಯ ಹೆಲಿಕಾಪ್ಟರ್‌ ಪತನಗೊಂಡು ಸಂಭವಿಸಿದ ದುರಂತದಲ್ಲಿ ಕಾಸರಗೋಡು ಜಿಲ್ಲೆಯ ಯೋಧ ಕೆ.ವಿ.ಅಶ್ವಿ‌ನ್‌ (24) ಹುತಾತ್ಮರಾಗಿದ್ದಾರೆ. ಅವರು ಜಿಲ್ಲೆಯ ಚೆರ್ವತ್ತೂರ್‌ನ ಕಝಕ್ಕು­ಮೇರಿಯ ನಿವಾಸಿಯಾಗಿದ್ದಾರೆ.

ಒಟ್ಟಾರೆಯಾಗಿ ಈ ದುರಂತದಲ್ಲಿ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ ಐದು ಮಂದಿ ಅಸುನೀಗಿದ್ದಾರೆ. ಅಶ್ವಿ‌ನ್‌ ಅವರು 4 ವರ್ಷಗಳಿಂದ ಭೂಸೇನೆಯ ತಾಂತ್ರಿಕ ಸಿಬಂದಿಯಾಗಿ ಕರ್ತವ್ಯ ನಿರ್ವಹಿ­ಸು­ತ್ತಿದ್ದರು.

ಕೆ.ವಿ.ಅಶ್ವಿನ್(24) ಅವರ ಪಾರ್ಥಿವ ಶರೀರ ಇಂದು (ಸೋಮವಾರ) ಹುಟ್ಟೂರಾದ ಕಾಸರಗೋಡಿನ ಚೆರ್ವತ್ತೂರಿಗೆ ತಲುಪಿದ್ದು, ಕಿಯಕ್ಕಮುರಿಯ ಮನೆಯ ಪರಿಸರದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

ವಿಮಾನ ಮೂಲಕ ಕಣ್ಣೂರಿಗೆ ತರಲಾಗಿದ್ದ ಮೃತದೇಹವನ್ನು ಬಳಿಕ  ಚೆರ್ವತ್ತೂರಿಗೆ ತರಲಾಯಿತು. ಸೇನಾಪಡೆಯ ಅಧಿಕಾರಿಗಳು ಜೊತೆಗಿದ್ದರು.
ಚೆರ್ವತ್ತೂರು ಕಿಯಕ್ಕಮುರಿಯ ವಾಚನಾಲಯದ ಪರಿಸರದಲ್ಲಿ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಿಡಲಾಗಿದ್ದು, ಸಾವಿರಾರು ಮಂದಿ ಅಂತಿಮ ದರ್ಶನ ಪಡೆದರು.
 ರಾಜ್ಯ ಸರಕಾರದ ಪರ ಬಂದರು ಸಚಿವ ಅಹ್ಮದ್ ದೇವರ್ ಕೋವಿಲ್ ಅಂತಿಮ ನಮನ ಸಲ್ಲಿಸಿದರು. ಮುಖ್ಯಮಂತ್ರಿ ಪರ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್  ಪುಷ್ಪಚಕ್ರ ಅರ್ಪಿಸಿದರು.

Leave a Reply

Your email address will not be published. Required fields are marked *

error: Content is protected !!