ವಿಟ್ಲ: ಚಲಿಸುತ್ತಿದ್ದ ಓಮ್ನಿ ಕಾರಿನಲ್ಲಿ ಬೆಂಕಿ
ವಿಟ್ಲ: ಚಲಿಸುತ್ತಿದ್ದ ಓಮ್ನಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಆಹುತಿಯಾದರೂ ಪ್ರಯಾಣಿಕರು ಪಾರಾದ ಘಟನೆ ರವಿವಾರ ಸಂಭವಿಸಿದೆ.
![](http://newsbites.in/wp-content/uploads/2022/10/IMG_20221023_151313-300x230.png)
ದೇರಳಕಟ್ಟೆ ಮೂಲದ ಕುಟುಂಬ ಮಾಣಿ ಕಡೆಗೆ ಬರುತ್ತಿದ್ದಾಗ ಓಮ್ನಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಚಾಲಕ ಮತ್ತು ಪ್ರಯಾಣಿಕರು ವಾಹನ ನಿಲ್ಲಿಸಿ ಹೊರಗಡೆ ಬಂದಿದ್ದಾರೆ.
![](http://newsbites.in/wp-content/uploads/2022/10/IMG_20221023_151334.png)
ಕೂಡಲೇ ಸ್ಥಳೀಯರು ಬೆಂಕಿ ನಂದಿಸಲು ಯತ್ನಿಸಿದರು. ಬಳಿಕ ವಿನಯ ಅವರ ಸರ್ವೀಸ್ ಸ್ಟೇಷನ್ ನಿಂದ ನೀರು ಹಾರಿಸಲಾಯಿತು. ಆದರೆ ಅಷ್ಟೋತ್ತಿಗಾಗಲೇ ವಾಹನ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿತ್ತು.