ಕರಾವಳಿರಾಜಕೀಯರಾಜ್ಯ

ಪ್ರಾಕೃತಿಕ ವಿಕೋಪದಿಂದ ಪೂರ್ತಿ ಮನೆ ಬಿದ್ದರೆ 5 ಲಕ್ಷ ಪರಿಹಾರ ಕೊಡಿ: ಶಾಸಕ ಅಶೋಕ್ ರೈ ಮನವಿ




ಮಂಗಳೂರು: ಮಳೆಗೆ ಧರೆ ಕುಸಿದು, ಗಾಳಿಗೆ ಸೇರಿದಂತೆ ಪೃಕೃತಿ ವಿಕೋಪದಿಂದ ಮನೆ ಪೂರ್ತಿ ದ್ವಂಸವಾದರೆ ಅಂಥವರಿಗೆ ಸರಕಾರದಿಂದ ಕನಿಷ್ಟ 5 ಲಕ್ಷ ಪರಿಹಾರ ಕೊಡಬೇಕು‌ ಎಂದು ಶಾಸಕ ಅಶೋಕ್ ರೈ ಕೆಡಿಪಿ ಸಭೆಯಲ್ಲಿ ಸಚಿವ ದಿನೇಶ್ ಗುಂಡೂರಾವ್ ಅವರಲ್ಲಿ‌ ಮನವಿ ಮಾಡಿದರು.


ಸರಕಾರ ಸದ್ಯ‌ ಮನೆ‌ಪೂರ್ತಿ ದ್ವಂಸವಾದರೆ 1.25 ಲಕ್ಷ ಪರಿಹಾರ ಕೊಡುತ್ತಿದೆ. ಈ ಹಣದಿಂದ ಮನೆ ಕಟ್ಲಿಕ್ಕೆ ಸಾದ್ಯವಿದೆಯೇ? ಸರಕಾರದ ಹಣ ಬರುವುದು ಹಂತ ಹಂತವಾಗಿ ಮನೆ ಯೋಜನೆ ಪೂರ್ತಿಯಾಗುವಾಗ ವರ್ಷ ಕಳೆಯುತ್ತದೆ ಅಷ್ಟು‌ಸಮಯ ಮನೆ ಕಳೆದುಕೊಂಡವರು‌ ಏನು‌‌ ಮಾಡುವುದು? ಅವರಿಗೆ ಸೂಕ್ತ ಒಂದು‌ ಚಿಕ್ಕ‌ ಮನೆಯ‌ ನಿರ್ಮಾಣಕ್ಕೆ ಸರಕಾರ 5 ಲಕ್ಷ ಕೊಡುವಂತಾಗಬೇಕು ಎಂದು ಶಾಸಕರು‌ ಸಭೆಯಲ್ಲಿ‌‌ ಮನವಿ‌ ಮಾಡಿದರು.

ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕೆಲವು‌ ಮನೆಗಳು ಧರೆ ಕುಸಿದು ದ್ವಂಸವಾಗಿದೆ, ಕೆಲವೊಂದು ಕಡೆ ಭಾಗಶ ಹಾನಿಯಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಮಳೆಗಾಲದಲ್ಲಿ ಧರೆ ಕುಸಿತ ಹೆಚ್ಚಾಗಿರುತ್ತದೆ. ಸರಕಾರ ವಿಶೇಷ ಗಮನಹರಿಸಿ   ದ ಕ ಜಿಲ್ಲೆಗೆ ವಿಶೇಷ ಮಾನ್ಯತೆಯನ್ನು ನೀಡಿ‌ ಪರಿಹಾರ‌ ಮೊತ್ತವನ್ನು ಹೆಚ್ಚಿಸಬೇಕು‌ ಎಂದು‌ ಶಾಸಕರು‌ ಮನವಿ ಮಾಡಿದರು. ಇದಕ್ಕೆ ಉತ್ತರ ನೀಡಿದ ಸಚಿವರು ಈ ಬಗ್ಗೆ ಚರ್ಚಿಸಿ‌ ತೀರ್ಮಾನ ಕೈಗೊಳ್ಳೋಣ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!