ಕರಾವಳಿ

ವ್ಯಾಪಾರಿಗಳ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಖಂಡನೀಯ: ಎಸ್ಸೆಸ್ಸೆಫ್

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕಾಣಿಯೂರು ಎಂಬಲ್ಲಿ ವ್ಯಾಪಾರಿಗಳ ಮೇಲೆ ನಡೆದ ಮಾರಣಾಂತಿಕ ಹಲ್ಲೆಯನ್ನು ಎಸ್ಸೆಸ್ಸಫ್ ದಕ್ಷಿಣ ಕನ್ನಡ ಜಿಲ್ಲಾ ಈಸ್ಟ್ ಸಮಿತಿಯು ಖಂಡಿಸಿದೆ.

ಈ ಮಾರಣಾಂತಿಕ ಹಲ್ಲೆಯ ಬಗ್ಗೆ ಪೋಲೀಸ್ ಇಲಾಖೆಯು ಸೂಕ್ತ ತನಿಖೆಯನ್ನು ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ವಹಿಸಬೇಕು. ಪೋಲೀಸ್ ಇಲಾಖೆಯ ಕಾರ್ಯ ವೈಖರಿಯಲ್ಲಿ ಆತಂಕವನ್ನು ಉಂಟು ಮಾಡುವಂತೆ ದೌರ್ಭಾಗ್ಯವಶಾತ್ ನಡೆದ ಈ ಹಲ್ಲೆಯು ಎಲ್ಲಿಯೂ ಮುಂದುವರಿಯದಂತೆ ಇಲಾಖೆಯು ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಪೋಲೀಸ್ ಇಲಾಖೆಯೊಂದಿಗೆ ಎಸ್ಸೆಸ್ಸಫ್ ಆಗ್ರಹಿಸಿದೆ.

Leave a Reply

Your email address will not be published. Required fields are marked *

error: Content is protected !!