ಸಾರೆಪುಣಿ: 31ನೇ ವರ್ಷದ ಅನುಸ್ಮರಣೆ, 2 ದಿನದ ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ
ಪುತ್ತೂರು: ಮುಹಿಯುದ್ದೀನ್ ಜುಮಾ ಮಸೀದಿ ದಾರುಲ್ ಉಲೂಮ್ ಮದರಸ ಮತ್ತು ಜಮಾಅತ್ ಕಮಿಟಿ ಸಾರೆಪುಣಿ
ಇದರ ಅದೀನದಲ್ಲಿ ಇರುವ ಶಂಸುಲ್ ಉಲಮಾ ಯಂಗ್ ಮೆನ್ಸ್ ಸಾರೆಪುಣಿ ಇದರ ಆಶ್ರಯದಲ್ಲಿ 31ನೇ ವರ್ಷದ ಅನುಸ್ಮರಣೆ ಮತ್ತು 2 ದಿವಸದ ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಸಾರೆಪುಣಿ ಮಸೀದಿ ವಠಾರದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಸ್ವಾಗತ ಸಮಿತಿ ಚೇರ್ಮೆನ್ ಸುಲೈಮಾನ್ MH ಗ್ರೂಪ್ ಬೇಕಲ್, ಸಾರೆಪುಣಿ ಮಸೀದಿ ಖತೀಬ್ ಮನ್ಸೂರ್ ರಯೀಸಿ, ಮುಹಲ್ಲಿಮ್ ಹಮೀದ್ ಮುಸ್ಲಿಯಾರ್, ವೈಸ್ ಚೇರ್ಮೆನ್ ಅಶ್ರಫ್ ಸಾರೆಪುಣಿ, ಕನ್ವಿನರ್ ಇಬ್ರಾಹಿಂ S, ಕೋಶಾಧಿಕಾರಿ ತಾಜುದ್ದೀನ್, ಸಂಘಟನಾ ಕಾರ್ಯದರ್ಶಿ DA ಬಶೀರ್ ಗಟ್ಟಮನೆ ಸದಸ್ಯರುಗಳಾದ ಅರಬಿಕುಂಞಿ, SN ಅಬ್ದುಲ್ಲಾ, ಅಬ್ದುಲ್ ರಝಕ್, ಉಸ್ಮಾನ್, ರಫೀಕ್, ಹನೀಫ್, ಝಕರಿಯ, ಮುಝಮ್ಮಿಲ್, ಶರಫುದ್ದೀನ್, ಬಶೀರ್ ಸಾರೆಪುಣಿ ಉಪಸ್ಥಿತರಿದ್ದರು.

