ಕರಾವಳಿಕ್ರೈಂ

ಪುತ್ತೂರು: ನಮಗೆ ನ್ಯಾಯ ಕೊಡಿ- ಸಂತ್ರಸ್ತ ವಿದ್ಯಾರ್ಥಿನಿಯ ತಾಯಿಯ ಮನವಿ



ಪುತ್ತೂರು: ಮದುವೆಯಾಗುವುದಾಗಿ ನಂಬಿಸಿದ ಯುವಕ ಮಗಳು ಗರ್ಭವತಿಯಾದಾಗ ನಾನು ಮದುವೆಯಾಗುವುದಿಲ್ಲ ಎಂದು ಹೇಳಿದ್ದಾನೆ. ಇದೀಗ ನನ್ನ ಮಗಳು ಮಗುವಿಗೆ ಜನ್ಮವೆತ್ತಿದ್ದಾಳೆ. ನಮಗೆ ಯಾರಿಂದಲೂ ನ್ಯಾಯ ಸಿಗುತ್ತಿಲ್ಲ,  ನಮಗೆ ಎಲ್ಲಿ ನೋಡಿದರೂ ನ್ಯಾಯ ಸಿಗುತ್ತಿಲ್ಲ. ನಮಗೆ ನ್ಯಾಯ ಸಿಗದಿದ್ದರೆ ನಾವು ಬಿಡುವುದಿಲ್ಲ. ಎಲ್ಲಿಯೂ ಪ್ರತಿಭಟನೆಗೂ ಸಿದ್ಧ, ನ್ಯಾಯಕ್ಕಾಗಿ ನಾವು ಪತ್ರಿಕಾಗೋಷ್ಠಿ ನಡೆಸಿದ್ದೇವೆ ಎಂದು ಸಂತ್ರಸ್ತೆ ಯುವತಿಯ ತಾಯಿ ಪತ್ರಿಕಾಗೋಷ್ಠಿಯಲ್ಲಿ ಅಳಲು ತೋಡಿಕೊಂಡಿದ್ದಾರೆ.



ಶ್ರೀಕೃಷ್ಣ ಜೆ.ರಾವ್‌ಗೆ ನನ್ನ ಮಗಳೊಂದಿಗೆ ಲವ್ ಇತ್ತು. ಆಕೆ ಗರ್ಭಿಣಿಯಾಗಿರುವ ವಿಚಾರವನ್ನು ಶ್ರೀಕೃಷ್ಣನೇ ನನ್ನ ಬಳಿ ಬಂದು ತಪ್ಪಾಗಿದೆ ಎಂದು ಹೇಳಿ ವಿಷಯ ತಿಳಿಸಿದ್ದ. ಈ ವಿಚಾರವನ್ನು ಅವನ ತಂದೆಗೂ ತಿಳಿಸಿದ್ದೆ. ಆಗ ಅವರೇ ಹಾಗಾದರೆ ಮದುವೆ ಮಾಡಿಸಿ ಬಿಡುವ ಎಂದು ತಿಳಿಸಿದ್ದರು. ಹಾಗೆ ಗರ್ಭಿಣಿಯ ಪರೀಕ್ಷೆಗೆಂದು ಶ್ರೀಕೃಷ್ಣ ಜೆ.ರಾವ್‌ ನ ತಂದೆ ಪಿ.ಜಿ.ಜಗನ್ನಿವಾಸ ರಾವ್, ಅವರ ಪತ್ನಿ ಹಾಗು ನಾನು ಮತ್ತು ಮಗಳು ಜೊತೆಯಲ್ಲೇ ಆಸ್ಪತ್ರೆಗೆ ಹೋದಾಗ ಮಗುವನ್ನು ತೆಗೆಸುವಂತೆ ಪರೀಕ್ಷೆ ಮಾಡಿದಾಗ ಆಕೆಗೆ 7 ತಿಂಗಳಾಗಿರುವುದರಿಂದ ಕಷ್ಟ ಸಾಧ್ಯ ಎಂದಿದ್ದರು. ಈ ನಡುವೆ ಶ್ರೀಕೃಷ್ಣನ ತಾಯಿ ನಮ್ಮಲ್ಲಿ ನನ್ನ ಮಗನೊಂದಿಗೆ ಮದುವೆಗೆ ಕನಸಿನಲ್ಲೂ ಗ್ರಹಿಸಬೇಡಿ ಎಂದಿದರಲ್ಲದೆ ಬಂಟ್ವಾಳದ ಡಾಕ್ಟರ್‌ನ ಪರಿಚಯವಿದೆ. ಅವರು ಎಲ್ಲಾ ವ್ಯವಸ್ಥೆ ಮಾಡುತ್ತಾರೆ ಎಂದಾಗ ನನ್ನ ಮಗಳಿಗೆ ತೊಂದರೆ ಆಗುವ ಲಕ್ಷಣ ಕಂಡು ನಾನು ಹಿಂಜರಿದೆ. ಆಗ ಅವರ ಪುತ್ರ ನನಗೆ ಕರೆ ಮಾಡಿ  ನಾನು ಆತ್ಮಹತ್ಯೆ ಮಾಡುತ್ತೇನೆ ಎಂದು ಹೇಳಿದ. ಅದಕ್ಕೆ ನಾನು ಫೋನ್ ಕಟ್ ಮಾಡಿದೆ. ಈ ಕುರಿತು ನಾನು ಪೊಲೀಸರಿಗೆ ದೂರು ನೀಡಿದೆ ಎಂದು ತಿಳಿಸಿದರು.



ನಾನು ಜೂ.22ಕ್ಕೆ ಮಹಿಳಾ ಪೊಲೀಸ್ ಸ್ಟೇಷನ್‌ನಲ್ಲಿ ದೂರು ನೀಡಲು ಹೋದಾಗ ಪಿ.ಜಿ.ಜಗನ್ನಿವಾಸ ರಾವ್‌ ಅವರು ಠಾಣೆಗೆ ಬಂದು ನನ್ನ ಮಗನಿಗೆ 21 ವರ್ಷ ಆದ ತಕ್ಷಣ ರಿಜಿಸ್ಟರ್ ಮದುವೆ ಮಾಡಿಸುತ್ತೇನೆ ಎಂದು ಹೇಳಿ ಬಳಿಕ ಶಾಸಕರಿಗೆ ಕರೆ ಮಾಡಿದ್ದರು. ಶಾಸಕರ ಕರೆಯನ್ನು ನನಗೆ ಕೊಟ್ಟು ಶಾಸಕರೊಂದಿಗೆ ಮಾತನಾಡಲು ತಿಳಿಸಿದರು.
ಶಾಸಕರು ಪೋನ್‌ನಲ್ಲಿ ನನ್ನಲ್ಲಿ ಮಾತನಾಡಿ ಎಫ್‌ಐಆ‌ರ್ ಈಗ ಮಾಡಬೇಡಿ. ಜೂ.23ಕ್ಕೆ ಆವನಿಗೆ 21 ವರ್ಷ ಆದ ಬಳಿಕ ಅವರು ಮದುವೆ ಒಪ್ಪಿದಾರಲ್ಲ ಎಂದರು. ಹಾಗೆ ಠಾಣೆಯಲ್ಲಿ ಮುಚ್ಚಳಿಕೆ ಬರೆಸಿ ಇತ್ಯರ್ಥ ಆಗಿತ್ತು. ಆದರೆ ಹುಡುಗನಿಗೆ 21 ವರ್ಷ ಆದ ಬಳಿಕ ಅವರು ಮದುವೆ ಒಪ್ಪದಿರುವುದನ್ನು ಶಾಸಕರಿಗೆ ಕರೆ ಮಾಡಿ ತಿಳಿಸಿದೆ. ಅದಕ್ಕೆ ಅವರು ಮದುವೆಗೆ ಒಪ್ಪದಿದ್ದರೆ ನೀವು ಇದನ್ನು ಹೇಗೆ ಬೇಕೋ ಹಾಗೆ ಕೇಸ್ ಮುಂದುವರಿಸಿ ಎಂದು ಹೇಳಿದ್ದಾರೆ ಎಂದು ಸಂತ್ರಸ್ತೆಯ ತಾಯಿ ಹೇಳಿದರು.


ಹಿಂದೂ ಆಗಿ ನಮ್ಮಲ್ಲೇ ಅನ್ಯಾಯ ಆದಾಗ ನನ್ನ ಮಗಳಿಗೆ ನ್ಯಾಯಕ್ಕಾಗಿ ಹಿಂದು ಸಂಘಟನೆಯ ಮುಖಂಡರಲ್ಲೂ ಮನವಿ ಮಾಡಿದ್ದೇವೆ. ಬಜರಂಗದಳದ ಮುರಳಿಕೃಷ್ಣ ಹಸಂತಡ್ಕ ಅವರಲ್ಲಿ ಮಾತನಾಡಿದಾಗ ಅವರು ಕೂಡಾ ನ್ಯಾಯ ಒದಗಿಸುವ ಕಾರ್ಯ ಮಾಡಿಲ್ಲ. ಮಂಗಳೂರಿನಲ್ಲೂ ಶರಣ್‌ ಪಂಪ್‌ವೆಲ್‌ ಅವರಲ್ಲಿ ಪೋನ್‌ನಲ್ಲಿ ಕರೆ ಮಾಡಿ ಮನವಿ ಮಾಡಿದ್ದೆವು. ಅರುಣ್ ಕುಮಾ‌ರ್ ಪುತ್ತಿಲರಲ್ಲೂ ಮಾತನಾಡಿದ್ದೆ, ಯಾರೂ ನ್ಯಾಯ ಒದಗಿಸಲು ಮುಂದಾಗಿಲ್ಲ ಎಂದು ಸಂತ್ರಸ್ತೆಯ ತಾಯಿ ಹೇಳಿದ್ದಾರೆ. ಹಿಂದೂ ಮುಖಂಡರೋರ್ವರು 10 ಲಕ್ಷ ಹಣ ನೀಡುವ ವಿಚಾರ ಮಾತನಾಡಿದ್ದಾರೆ, 1 ಕೋಟಿ ರೂ ಕೊಟ್ಟರೂ ಬೇಡ, ನ್ಯಾಯ ಬೇಕು ಎಂದು ಹೇಳಿದ್ದೆ ಎಂದು ಅವರು ಹೇಳಿದರು.

ನನ್ನ ಮಗಳನ್ನು ಮದುವೆ ಆಗಲು ಒಪ್ಪದ ಶ್ರೀಕೃಷ್ಣನ ವಿರುದ್ಧ ನಾವು ಜೂ.24ರಂದು ಮಹಿಳಾ ಪೊಲೀಸ್‌ ಠಾಣೆಗೆ ದೂರು ನೀಡಿ ಪ್ರಕರಣ ದಾಖಲಿಸಿದ್ದೇವೆ. ಆದರೆ ಪೊಲೀಸರು ಅವರನ್ನು ವಿಚಾರಣೆ ಕರೆದಿಲ್ಲ. ಪೊಲೀಸರನ್ನು ಈ ಕುರಿತು ಪ್ರಶ್ನಿಸಿದರೆ ಶ್ರೀಕೃಷ್ಣ ನಾಪತ್ತೆಯಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಅವರ ತಂದೆ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ತಿಳಿಸಿದ್ದಾರೆ. ಶ್ರೀಕೃಷ್ಣ ಓಡಿ ಹೊದದಲ್ಲ ಮನೆಯವರೇ ಅವನನು ಮುಚ್ಚಿಟಿದ್ದಾರೆ ಎಂದು ಅವರು ಆರೋಪಿಸಿದರು.

Leave a Reply

Your email address will not be published. Required fields are marked *

error: Content is protected !!