ಕರಾವಳಿ

ಸುಳ್ಯ: ಮೆದುಳು ರಕ್ತಸ್ರಾವದಿಂದ ಬಳಲುತ್ತಿರುವ ರೋಗಿಯ ತುರ್ತು ಚಿಕಿತ್ಸೆಗೆ ಬೇಕಿದೆ ದಾನಿಗಳ ನೆರವುಸುಳ್ಯ ಜಯನಗರ ನಿವಾಸಿ ಆಟೋ ಚಾಲಕ ರಫೀಕ್ ಕಮ್ಮಾಡಿ ಎಂಬ ಯುವಕ ಮೆದುಳು ರಕ್ತಸ್ರಾವದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಈ ಕುಟುಂಬ ರೋಗಿಯ ಚಿಕಿತ್ಸೆಗಾಗಿ ದಾನಿಗಳ ಸಹಕಾರವನ್ನು ಕೋರಿದ್ದಾರೆ.

ಆಟೋ ಚಾಲನೆಯಿಂದ ಕುಟುಂಬದ ಜೀವನ ನಿರ್ವಹಿಸುತ್ತಿದ್ದ ಈ ಯುವಕ ವಿಕಲಚೇತನ ಹೊಂದಿರುವ ಪತ್ನಿಯೊಂದಿಗೆ ಜಯನಗರ ಪರಿಸರದಲ್ಲಿ ವಾಸಿಸುತ್ತಿದ್ದಾರೆ. ವೈದ್ಯರ ಸಲಹೆಯಂತೆ ಚಿಕಿತ್ಸೆಗೆ ಸುಮಾರು 15 ಲಕ್ಷ ರೂಪಾಯಿ ಬೇಕಾಗಿದ್ದು ಇಷ್ಟೊಂದು ಬೃಹತ್ ಮೊತ್ತವನ್ನು ಭರಿಸಲು ಸಾಧ್ಯವಾಗದ ಈ ಕುಟುಂಬ ಕಣ್ಣೀರಿಡುತ್ತಿದ್ದು ಮಾಧ್ಯಮದ ಮೂಲಕ ದಾನಿಗಳ ಸಹಕಾರವನ್ನು ಕೋರಿದ್ದಾರೆ.

ಸಹಾಯ ನೀಡಲು ಇಚ್ಚಿಸುವವರು 9591310885 ನಂಬರ್ಗೆ ಗೂಗಲ್ ಪೇ ಅಥವಾ ಫೋನ್ ಪೇ ಮೂಲಕ ಸಹಕರಿಸಬಹುದು. ಅಥವಾ A/C 19000100053429
IFSC. FDRL0001900
name Basheer
Sulya

Leave a Reply

Your email address will not be published. Required fields are marked *

error: Content is protected !!