ರಾಜಕೀಯರಾಷ್ಟ್ರೀಯ

ಅರೆಬರೆ ಬಟ್ಟೆಗಳನ್ನು ಧರಿಸುವ ಯುವತಿಯರು….?: ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ನಾಯಕ

ಅರೆಬರೆ ಬಟ್ಟೆಗಳನ್ನು ಧರಿಸುವ ಯುವತಿಯರು ರಾಕ್ಷಸಿ ‘ಶೂರ್ಪನಖಿ’ಯಂತೆ ಕಾಣುತ್ತಾರೆ ಎಂದು ಮಹಿಳೆಯರ ಬಟ್ಟೆ ಬಗ್ಗೆ ಬಿಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿ ಕೈಲಾಶ್‌ ವಿಜಯವರ್ಗೀಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

‘ಹೆಣ್ಣು ಮಕ್ಕಳನ್ನು ನಾವು ದೇವತೆಯೆಂದು ಕಾಣುತ್ತೇವೆ. ನಿಮಗೆ ಒಳ್ಳೆ ದೇಹ ನೀಡಿದ್ದಾನೆ. ಆದ್ದರಿಂದ ಒಳ್ಳೆಯ ಬಟ್ಟೆ ಧರಿಸಿ. ಪೋಷಕರು ಮಕ್ಕಳಿಗೆ ಈ ಬಗ್ಗೆ ತಿಳಿ ಹೇಳಬೇಕು’ ಎಂದು ಹೇಳಿದ್ದಾರೆ.

ಮಧ್ಯಪ್ರದೇಶದ ಇಂದೋರ್‌ನಲ್ಲಿ ಹನುಮ ಜಯಂತಿ ಪ್ರಯುಕ್ತ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು ರಾತ್ರಿ ವೇಳೆ ನಾನು ಹೊರಗೆ ಹೋಗುವಾಗ ಅನೇಕ ಯುವಕ–ಯುವತಿಯರು ಕುಡಿದ ಅಮಲಿನಲ್ಲಿ ತೇಲಾಡುತ್ತಿರುತ್ತಾರೆ. ಅವರನ್ನು ನಿಲ್ಲಿಸಿ ಕೆನ್ನೆಗೆ ಬಾರಿಸಬೇಕೆಂದು ಎನ್ನಿಸುತ್ತದೆ. ಯುವತಿಯರು ಅರೆಬರೆ ಬಟ್ಟೆಗಳನ್ನು ಧರಿಸಿ ರಾಕ್ಷಸಿ ’ಶೂರ್ಪನಖಿ’ ಹಾಗೆ ಕಾಣುತ್ತಾರೆ’ ಎಂದು ಹೇಳಿದ್ದಾರೆ.

ಬಿಜೆಪಿ ನಾಯಕನ ಈ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿದ್ದು ಮಹಿಳಾ ವಿರೋಧಿಯಿಂದ ಮಾತ್ರ ಇಂತಹ ಹೇಳಿಕೆ ಸಾಧ್ಯ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *

error: Content is protected !!