ಬಿಹಾರ: ಹಿಜಾಬ್ ವಿವಾದ.!?
ಬಿಹಾರ: ಪರೀಕ್ಷೆಯ ವೇಳೆ ಹಿಜಾಬ್ ತೆಗೆಯಲು ನಿರಾಕರಿಸಿದ್ದಕ್ಕೆ ಉಪನ್ಯಾಸಕರೊಬ್ಬರು ತನ್ನ ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಬಳಸಿದ್ದಾರೆ ಎಂದು ಇಲ್ಲಿನ ಕಾಲೇಜು ವಿದ್ಯಾರ್ಥಿನಿಯೊಬ್ಬರು ಆರೋಪಿಸಿದ್ದಾರೆ.
‘ವಿದ್ಯಾರ್ಥಿನಿಗೆ ಹಿಜಾಬ್ ತೆಗೆಯಲು ಸೂಚಿಸಿರಲಿಲ್ಲ. ಆಕೆ ಬ್ಲೂಟೂತ್ ಸಾಧನ ಬಳಸಿದ್ದಾಳೊ ಎಂಬುದನ್ನು ತಿಳಿಯಲು ಕಿವಿಗಳು ಕಾಣುವಂತೆ ಶಿರವಸ್ತ್ರ ಸರಿಸಲು ಹೇಳಿದ್ದೇವೆ’ ಎಂದು ಮಿತಾನ್‌ಪುರದ ಮಹಾಂತ ದರ್ಶನ ದಾಸ್ ಮಹಿಳಾ ಕಾಲೇಜಿನ ಪ್ರಾಂಶುಪಾಲರು ಹೇಳಿದ್ದಾರೆ.
‘ಉಪನ್ಯಾಸಕರೊಬ್ಬರು ನನ್ನನ್ನು ದೇಶ ವಿರೋಧಿ ಮತ್ತು ಪಾಕಿಸ್ತಾನಕ್ಕೆ ಹೋಗು ಎಂದು ಬೈದಿರುವುದಾಗಿ ವಿದ್ಯಾರ್ಥಿನಿ ಆರೋಪಿಸಿದ್ದಾಳೆ. ಆ ವೇಳೆ ನಾನು ಪರೀಕ್ಷಾ ಕೊಠಡಿಯಲ್ಲಿ ಇರಲಿಲ್ಲ. ಆದರೆ ಅಲ್ಲಿದ್ದ ಇತರ ವಿದ್ಯಾರ್ಥಿನಿಯರ ಬಳಿ ವಿಚಾರಿಸಿದಾಗ ಇದು ಸುಳ್ಳು ಎಂದಿದ್ದಾರೆ’ ಎಂದೂ ಅವರು ತಿಳಿಸಿದ್ದಾರೆ.
‘ಎರಡೂ ಕಡೆಯವರ ಜೊತೆ ಮಾತುಕತೆ ನಡೆಸಿದ್ದೇವೆ. ಪರೀಕ್ಷೆಗಳು ಶಾಂತಿಯುತವಾಗಿ ನಡೆದಿವೆ. ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.