ಕುಂಬ್ರ ಮರ್ಕಝುಲ್ ಹುದಾ ಪದವಿಪೂರ್ವ ವಿಭಾಗದ ವಿದ್ಯಾರ್ಥಿ ಸಂಘದ ಚುನಾವಣೆ
ಪುತ್ತೂರು: ಮರ್ಕಝುಲ್ ಹುದಾ ಮಹಿಳಾ ಕಾಲೇಜು ಕುಂಬ್ರ ಇದರ ಪದವಿಪೂರ್ವ ವಿಭಾಗದ 2026-27ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘದ ಚುನಾವಣೆ ಮರ್ಕಝ್ ಕ್ಯಾಂಪಸ್ ಆವರಣದಲ್ಲಿ ನಡೆಯಿತು.

ನೂತನ ಸಾಲಿನ ಅಧ್ಯಕ್ಷರಾಗಿ ದ್ವಿತೀಯ ವಾಣಿಜ್ಯ ವಿಭಾಗದ ಕೆ.ಎ ಫಾತಿಮತ್ ತಬ್ಶೀರಾ ಅಜ್ಜಿಕಲ್ಲು ಹಾಗೂ ಕಾರ್ಯದರ್ಶಿಯಾಗಿ ದ್ವಿತೀಯ ವಿಜ್ಞಾನ ವಿಭಾಗದ ಅಮ್ನ ಫಾತಿಮ ಸವಣೂರು ಆಯ್ಕೆಯಾದರು. ಸಹಕಾರ್ಯದರ್ಶಿಯಾಗಿ ಪ್ರಥಮ ವಿಜ್ಞಾನದ ಆಯಿಶತು ಫಾಸಿಲ ಕುಂದಾಪುರ ಚುನಾಯಿತರಾದರು.
ಹೆಲ್ತ್ ಮುಖ್ಯಸ್ಥರಾಗಿ ದ್ವಿತೀಯ ವಾಣಿಜ್ಯ ವಿಭಾಗದ ಫಾತಿಮತ್ ಶಝ ಕೂರ್ನಡ್ಕ, ಸ್ಪೋರ್ಟ್ಸ್ ವಿಭಾಗದ ಮುಖ್ಯಸ್ಥರಾಗಿ ದ್ವಿತೀಯ ವಿಜ್ಞಾನ ವಿಭಾಗದ ಹುನೈದಾ ಶಾಮಿಲಿ ಕಲ್ಲೇರಿ, ಶಿಸ್ತು ವಿಭಾಗದ ಮುಖ್ಯಸ್ಥರಾಗಿ ದ್ವಿತೀಯ ವಿಜ್ಞಾನ ವಿಭಾಗದ ಹಯಾ ಫಾತಿಮಾ ಕುಂಬ್ರ, ಕಲ್ಚರಲ್ ವಿಭಾಗದ ಮುಖ್ಯಸ್ಥರಾಗಿ ದ್ವಿತೀಯ ವಿಜ್ಞಾನ ವಿಭಾಗದ ತನ್ವೀರ ಕುಂಬ್ರ ಆಯ್ಕೆಯಾದರು.
ಮುಖ್ಯ ಚುನಾವಣಾ ಆಯುಕ್ತರಾಗಿ ಪದವಿಪೂರ್ವ ವಿಭಾಗದ ಪ್ರಾಂಶುಪಾಲರಾದ ಸಂಧ್ಯಾ ಪಿ, ಚುನಾವಣಾಧಿಕಾರಿಗಳಾಗಿ ಉಪನ್ಯಾಸಕಿಯರಾದ ಪ್ರತಿಭಾ ರೈ, ಡಾ.ನೂರ್ ಜಹಾನ್, ಸಹಾಯಕ ಅಧಿಕಾರಿಗಳಾಗಿ ಉಪನ್ಯಾಸಕಿಯರಾದ ದೇವಿಕಾ ಶೆಣೈ, ಪವಿತ್ರ ಪಿ.ಜಿ, ಲಾವಣ್ಯ, ಪ್ರತೀಕ್ಷ, ಕಮಲ ಬಿ, ಸೌಮ್ಯ ಎಂ ಆರ್, ಜೋಸ್ನಾ ನೋರೋನ, ಸ್ವಾತಿ ಜಿ ಸಹಕರಿಸಿದರು. ಮೊಬೈಲ್ ಆಪ್ ಟೆಕ್ನಿಕಲ್ ಮೂಲಕ ಮತ ಚಲಾವಣೆ ನಡೆದಿತ್ತು.




