ಸವಣೂರು: ಬೈಕ್ ಅಪಘಾತ, ಸವಾರ ಸಾವು, ಸಹಸವಾರನಿಗೆ ಗಾಯ
ಪುತ್ತೂರು: ಬೆಳ್ಳಾರೆ–ಸವಣೂರು ರಸ್ತೆಯ ಕನ್ನಡಕುಮೇರಿ ಎಂಬಲ್ಲಿ ಬೈಕ್ ನಿಯಂತ್ರಣ ತಪ್ಪಿ ವಿದ್ಯುತ್ ಕಂಬದ ಸ್ಟೇ ವೈರ್ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟಿದ್ದು, ಸಹಸವಾರ ಗಾಯಗೊಂಡ ಘಟನೆ ಅ.20ರಂದು ರಾತ್ರಿ ನಡೆದಿದೆ.

ಕಡಬ ಕುದ್ಮಾರು ನಿವಾಸಿ ಧನಂಜಯ ಮೃತಪಟ್ಟವರು. ಧನಂಜಯ ಅವರು ತಮ್ಮ ಸ್ನೇಹಿತ ರೋಷನ್ನನ್ನು ಬೈಕ್ ನಲ್ಲಿ ಸಹಸವಾರನಾಗಿ ಕೂರಿಸಿಕೊಂಡು ಬೆಳ್ಳಾರೆ–ಸವಣೂರು ರಸ್ತೆಯಲ್ಲಿ ಸಂಚರಿಸುತ್ತಿದ್ದರು. ಈ ವೇಳೆ ಕನ್ನಡಕುಮೇರಿ ತಲುಪಿದಾಗ ಬೈಕ್ನ ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿದ್ದ ವಿದ್ಯುತ್ ಕಂಬದ ಸ್ಟೇ ವೈರ್ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಅಪಘಾತದ ತೀವ್ರತೆಗೆ ಸವಾರ ಧನಂಜಯ ಅವರು ಸ್ಥಳದಲ್ಲೇ ಮೃತಪಟ್ಟಿದ್ದು, ಸಹಸವಾರ ರೋಷನ್ ಗಾಯಗೊಂಡಿದ್ದಾರೆ.
ಈ ಕುರಿತು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ. 61/2026ರಂತೆ ಭಾರತೀಯ ನ್ಯಾಯ ಸಂಹಿತೆಯ ಕಲಂ 281, 125(ಎ) ಮತ್ತು 106ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

