ಕರಾವಳಿಕ್ರೈಂ

ಕಡಬ: ಅತ್ತೆಗೆ ಜೀವ ಬೆದರಿಕೆ, ಕಲ್ಲು ಎಸೆದು ಗಾಯ, ಮನೆಯ ಕಿಟಕಿ ಗಾಜಿಗೆ ಹಾನಿ ಆರೋಪ-ಸೊಸೆಯ ವಿರುದ್ಧ ಪ್ರಕರಣ ದಾಖಲು



ಕಡಬ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಅತ್ತೆಗೆ ಜೀವ ಬೆದರಿಕೆ ಹಾಕಿ, ಮನೆಯ ಕಿಟಕಿಯ ಗಾಜಿಗೆ ಕಲ್ಲು ಎಸೆದು ಹಾನಿ ಮಾಡಿರುವುದಲ್ಲದೆ, ಕಲ್ಲಿನಿಂದ ಗಾಯಗೊಳಿಸಿದ ಆರೋಪದ ಮೇಲೆ ಸೊಸೆಯ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



ಕಡಬ ತಾಲೂಕಿನ ಕೊಯಿಲ ನಿವಾಸಿ ನೀಲಮ್ಮ (70) ಅವರು ನೀಡಿದ ದೂರಿನ ಪ್ರಕಾರ, ಅವರ ಸೊಸೆ ಮಂಗಳಾ ಬಾಯಿ ಎಂಬವರು ಅ. 12ರಂದು ಸಂಜೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮನೆಗೆ ಬಂದು ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.


ಮುಂದುವರಿದು, ಅ. 14ರಂದು ರಾತ್ರಿ ಮನೆಯ ಕಿಟಕಿಯ ಗಾಜಿಗೆ ಕಲ್ಲು ಎಸೆದು ಹಾನಿ ಮಾಡಿದ್ದು, ಇದರಿಂದ ಸುಮಾರು ₹30 ಸಾವಿರ ನಷ್ಟ ಸಂಭವಿಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಲ್ಲದೆ, ಆರೋಪಿ ಎಸೆದ ಕಲ್ಲಿನಿಂದ ನೀಲಮ್ಮ ಅವರಿಗೆ ಗಾಯವಾಗಿದ್ದು, ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಗಾಯಗೊಂಡ ನೀಲಮ್ಮ ಅವರು ಕಡಬದ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.



ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ. 118/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 352, 351(2), 118(1) ಮತ್ತು 324(4)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Leave a Reply

Your email address will not be published. Required fields are marked *

error: Content is protected !!