ಕರಾವಳಿ

ವೃದ್ಧ ಮಹಿಳೆಗೆ ಕೊಟ್ಟ ಭರವಸೆಯನ್ನು ಒಂದೇ ದಿನದಲ್ಲಿ ಈಡೇರಿಸಿದ ಶಾಸಕ ಅಶೋಕ್ ರೈ

ಪುತ್ತೂರು: ಬಲ್ನಾಡು ಗ್ರಾಮದ ವೃದ್ದ ಅಶಕ್ತ ಮಹಿಳೆಯ ಮನೆಗೆ ಜೂ.7ರಂದು ಭೇಟಿ ನೀಡಿದ್ದ ಶಾಸಕ ಅಶೋಕ್ ರೈ ವೃದ್ದೆಯ ಮನೆಯ ಪರಿಸ್ಥಿತಿ ನೋಡಿ ಮರುಗಿದ್ದರು. ಈ ವೇಳೆ ವೃದ್ದೆ ಮನೆಯಲ್ಲಿ ಗ್ಯಾಸ್ ಸೌಲಭ್ಯ ಇಲ್ಲ ಎನ್ನುವುದು ಶಾಸಕರ ಗಮನಕ್ಕೆ ಬಂದಿತ್ತು. ವೃದ್ಧ ಮಹಿಳೆ ಜೊತೆ ಮಾತನಾಡಿದ ಶಾಸಕರು ಮನೆಯ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಲ್ಲದೇ ನಿಮಗೆ ನಾನು ಗ್ಯಾಸ್ ವ್ಯವಸ್ಥೆ ಮಾಡಿ ಕೊಡುತ್ತೇನೆ ಎಂದು ವೃದ್ದೆಗೆ ಭರವಸೆ ನೀಡಿದ್ದರು.

ಇದೀಗ ಕೊಟ್ಟ ಭರವಸೆಯನ್ನು ಒಂದೇ ದಿನದಲ್ಲಿ ಈಡೇರಿಸಿರುವ ಶಾಸಕರು ಗ್ಯಾಸ್ ಒಲೆ, ಸಿಲಿಂಡರ್ ನ್ನು ವೃದ್ಧ ಮಹಿಳೆಯ ಮನೆಗೆ ಜೂ.9ರಂದು ತಲುಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಕಾಂಗ್ರೆಸ್ ಮುಖಂಡ ಶರೀಫ್ ಬಲ್ನಾಡು ಈ ಸಂದರ್ಭದಲ್ಲಿ ಉಪಸಿತರಿದ್ದರು. ಭರವಸೆ ನೀಡಿ ಕೂಡಲೇ ಅದನ್ನು ಈಡೇರಿಸಿರುವ ಶಾಸಕರ ಕಾರ್ಯ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದ್ದು ಶಾಸಕರ ಇಂತಹ ನಡೆಗಳು ನಿಜಕ್ಕೂ ಅಭಿನಂದನಾರ್ಹ ಎಂದು ಹಲವರು ಸಾಮಾಜಿಕ ಜಾಲ ತಾಣಗಳಲ್ಲಿ ಬರೆದುಕೊಂಡಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!