ಉಪ್ಪಿನಂಗಡಿ: ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
ಉಪ್ಪಿನಂಗಡಿ: ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕುಖ್ಯಾತ ಅಂತರ್‌ರಾಜ್ಯ ಕಳ್ಳನೋರ್ವನನ್ನು ಉಪ್ಪಿನಂಗಡಿ ಪೊಲೀಸರು ಹಾಸನದ ಬಿಟ್ಟಗೌಡನಹಳ್ಳಿ ಎಂಬಲ್ಲಿ ಬಂಧಿಸಿದ್ದಾರೆ.

ಹಾಸನ ಮೂಲದ, ಮಂಗಳೂರಿನ ತಲಪಾಡಿ ಎಂಬಲ್ಲಿ ವಾಸವಿದ್ದ ಅಕ್ಟರ್ ಸುಹೈಬ್ (24) ಬಂಧಿತ ಆರೋಪಿ. ಈತ 5 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಈತನ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ 2, ಬಂಟ್ವಾಳ ನಗರ ಠಾಣೆಯಲ್ಲಿ 1, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನಾಲ್ಕು ಹಾಗೂ ಕೇರಳದ ಕನಪುರಂ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿ ವಾರಂಟ್ ಜಾರಿಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಉಪ್ಪಿನಂಗಡಿ ಪೊಲೀಸ್ ಉಪನಿರೀಕ್ಷಕ ಕೌಶಿಕ್ ನೇತೃತ್ವದಲ್ಲಿ ಈತನನ್ನು ಬಂಧಿಸಿದ ತಂಡದಲ್ಲಿ ಸಿಬ್ಬಂದಿ ಶಿವರಾಮ ರೈ, ಶ್ರೀಶೈಲ ಎಂ.ಕೆ., ಮುಹಮ್ಮದ್ ಮೌಲನಾ ಇದ್ದರು.