ಕರಾವಳಿ

ನರಿಮೊಗರು: ಗಂಗಾಧರ ಸುವರ್ಣ ಹೃದಯಾಘಾತದಿಂದ ನಿಧನ


ಪುತ್ತೂರು: ದ.ಕ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಹಾಗೂ ಪುತ್ತೂರು ಬಿಲ್ಲವ ಸಂಘದ ಮಾಜಿ ಉಪಾಧ್ಯಕ್ಷರಾಗಿರುವ ನರಿಮೊಗರು ಸುವರ್ಣ ಎಸ್ಟೇಟ್ ಮಾಲೀಕ ವೇದನಾಥ ಸುವರ್ಣರವರ ಸಹೋದರ ಗಂಗಾಧರ ಸುವರ್ಣ (66ವ.) ರವರು ಹೃದಯಾಘಾತದಿಂದ ಏ.24 ರಂದು ರಾತ್ರಿ ನಿಧನ ಹೊಂದಿದ್ದಾರೆ.


ಕೃಷಿಕರೂ, ಶಿವಗಂಗಾ ಕನ್ಸ್ ಟ್ರಕ್ಷನ್ ಇದರ ಉದ್ಯಮಿ ಆಗಿರುವ ಗಂಗಾಧರ ಸುವರ್ಣರವರಿಗೆ ರಾತ್ರಿ ವೇಳೆ ಎದೆ ನೋವು ಕಾಣಿಸಿಕೊಂಡಿದ್ದು ಕೂಡಲೇ ಅವರನ್ನು ದರ್ಬೆ ಹಿತ ಆಸ್ಪತ್ರೆಗೆ ಕರೆತರಲಾಗಿದ್ದರೂ ಆಗಲೇ ಅವರು ಮೃತಪಟ್ಟಿದ್ದರು. ಮೃತರು ಪತ್ನಿ ಶರ್ಮಿಳಾ, ಪುತ್ರ ಕೌಶಿಕ್, ಪುತ್ರಿ ಕೀರ್ತನಾ, ಸಹೋದರ ವೇದನಾಥ ಸುವರ್ಣಹಾಗೂ ಮೂವರು ಸಹೋದರಿಯರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!