ಕರಾವಳಿ

ಎಸ್ಸೆಸ್ಸೆಲ್ಸಿ: ಬೆಳಂದೂರು ಈಡನ್ ಗ್ಲೋಬಲ್ ಶಾಲೆಗೆ 100% ಫಲಿತಾಂಶ


ಪುತ್ತೂರು: ಬೆಳಂದೂರು ಈಡನ್ ಗ್ಲೋಬಲ್ ಸ್ಕೂಲ್  2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 100% ಫಲಿತಾಂಶ ಪಡೆದುಕೊಂಡಿದೆ. ಶಾಲೆಯ 26 ವಿದ್ಯಾರ್ಥಿಗಳು ಪರೀಕ್ಷೆ ಬರೆದು ಎಲ್ಲರೂ ಉತ್ತೀರ್ಣರಾಗಿದ್ದು, ಆ ಮೂಲಕ ಸತತ ಆರನೇ ಬಾರಿಗೆ 100% ಫಲಿತಾಂಶ ದಾಖಲಿಸಿದೆ.


26 ವಿದ್ಯಾರ್ಥಿಗಳ ಪೈಕಿ 11 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 13 ಮಂದಿ ಪ್ರಥಮ ಶ್ರೇಣಿ ಮತ್ತು 2 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಪಡೆದಿದ್ದಾರೆ. ಹುಸ್ಸನ್ ನಿಶಾನುಲ್ ಹನೀಫ್ 606, ಇಹ್ಸಾನ್ ಬಿನ್ ಇಬ್ರಾಹಿಂ ಹೆಚ್ 596, ಆಯಿಷಾ ರಿಫಾ 591, ಮಹಮ್ಮದ್ ಅಸ್ಲಹ್ ಡಿ.ಎ 580, ಖತೀಜತ್ ದಿಯಾನ 570, ಫಾತಿಮಾ ಶೆಹನಾಝ್ 570, ಬಿ.ಆರ್. ಮುಹಮ್ಮದ್ ರಫೀ 561, ಶಾಝ ಫಾತಿಮಾ 560, ಶಾಹ್ಮಾ 559, ಮುಹಮ್ಮದ್ ಬದ್ರುಲ್ ಕಮಾಲ್ 550, ಮುಹಮ್ಮದ್ ಹಾಫಿಝ್ 542 ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ.


ಅತ್ಯುತ್ತಮ ಫಲಿತಾಂಶಕ್ಕಾಗಿ ಕಠಿಣ ಪರಿಶ್ರಮ ನಡೆಸಿದ ವಿದ್ಯಾರ್ಥಿಗಳು, ಪ್ರಾಂಶುಪಾಲರು, ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿದ ಶಿಕ್ಷಕರು, ಪೋಷಕರು ಮತ್ತು ಸಿಬ್ಬಂದಿ ವರ್ಗವನ್ನು ಸಂಸ್ಥೆಯ ಅಧ್ಯಕ್ಷರಾದ ಅಶ್ರಫ್ ಶಾ ಮಾಂತೂರ್, ಕಾರ್ಯದರ್ಶಿ ಬಶೀರ್ ಹಾಜಿ ಸವಣೂರು, ಟ್ರಸ್ಟ್ ಸದಸ್ಯರುಗಳಾದ ಪುತ್ತು ಬಾವ ಹಾಜಿ ಸವಣೂರು, ಖಾದರ್ ಹಾಜಿ ಸವಣೂರು, ಅಬ್ದುಲ್ ಹಮೀದ್ ಹಾಜಿ ಬೈತಡ್ಕ, ನಿಝರ್ ದರ್ಬೆ, ಇಸ್ಮಾಯಿಲ್ ಹಾಜಿ ಬೈತಡ್ಕ, ಮುಸ್ತಫಾ ಸಅದಿ ಪುತ್ತೂರು, ಅಬ್ಬಾಸ್ ಬಾವ ಹಾಜಿ ನೆಕ್ಕರೆ, ಮುಹಮ್ಮದ್ ಹಾಜಿ ನಡುಪದವು, ಅಶ್ರಫ್ ಕೆಕುಡೆ ಸವಣೂರು ಅಭಿನಂದನೆ ಸಲ್ಲಿಸಿದರು.
2026-27 ಸಾಲಿನ LKG ಯಿಂದ 10ನೇ ತರಗತಿಯವರೆಗಿನ ಅಡ್ಮಿಷನ್ ಪ್ರಕ್ರಿಯೆ ಆರಂಭಗೊಂಡಿದ್ದು ಸಂಸ್ಥೆಯನ್ನು ಸಂಪರ್ಕಿಸಬಹುದು ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!