ಸುಳ್ಯ: ಗಾಂಜಾ ಸೇವನೆ ಮಾಡಿದ್ದ ವ್ಯಕ್ತಿ ಪೊಲೀಸರ ವಶಕ್ಕೆ
ಸುಳ್ಯ: ಗಾಂಜಾ ಸೇವನೆ ಮಾಡಿದ್ದ ವ್ಯಕ್ತಿಯೊಬ್ಬನನ್ನು ಸುಳ್ಯ ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ.

ಸುಳ್ಯ ಕೆ ವಿ ಜಿ ಜಂಕ್ಷನ್ ಬಳಿ ಫೆ.26ರಂದು ಸಂಶಯಸ್ಪದವಾಗಿ ನಿಂತಿದ್ದ ವ್ಯಕ್ತಿಯೋರ್ವನನ್ನು ಸುಳ್ಯ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಸಂತೋಷ್ ಬಿಪಿ ರವರು ವಿಚಾರಿಸಿದಾಗ, ಆತನು ತನ್ನ ಹೆಸರು ದರ್ಶನ್ ಟಿ ಎಂ ಪ್ರಾಯ 23 ವರ್ಷ, ತಿಮ್ಮನ ಕೊಪ್ಪಲು ಗ್ರಾಮ, ಪಾಂಡವಪುರ, ಮಂಡ್ಯ ಎಂಬುದಾಗಿ ತಿಳಿಸಿದ್ದು, ಸದ್ರಿ ವ್ಯಕ್ತಿಯು ಗಾಂಜಾ ಸೇವನೆ ಮಾಡಿರುವ ಬಗ್ಗೆ ಸಂಶಯಗೊಂಡು ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿ ಅಮಲು ಪದಾರ್ಥವಾದ ಗಾಂಜಾವನ್ನು ಸೇವನೆ ಮಾಡಿರುವುದು ದೃಡಪಟ್ಟಿರುತ್ತದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ: 26/2025 ಕಲಂ: 27(ಬಿ) ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.