ಕರಾವಳಿ

ಎಜುಕೇಶನಲ್ ಎಕ್ಸಲೆನ್ಸ್ ಫೌಂಡೇಶನ್ ವತಿಯಿಂದ ಮೊದಲ ಹಂತದ ಕೌನ್ಸೆಲಿಂಗ್



ಪುತ್ತೂರು: ಎಜುಕೇಶನಲ್ ಎಕ್ಸಲೆನ್ಸ್ ಫೌಂಡೇಶನ್ ವತಿಯಿಂದ ಉನ್ನತ ವ್ಯಾಸಂಗ ಬಯಸುವ ವಿದ್ಯಾರ್ಥಿಗಳಿಗೆ ಮೊದಲ ಹಂತದ ಕೌನ್ಸೆಲಿಂಗ್ ಎ.19ರಂದು ಕಲ್ಲೇಗ ಜುಮಾ ಮಸೀದಿಯ ಸಭಾಭವನದಲ್ಲಿ ನಡೆಯಿತು. ಖ್ಯಾತ ತರಬೇತುದಾರ ರಫೀಕ್ ಮಾಸ್ಟರ್, ಸಿಎ ಮಹಮ್ಮದ್ ಜೌಹರ್ ಅಲಿ, ಅಡ್ವೊಕೇಟ್ ಮಹಮ್ಮದ್ ಅಶ್ರಫ್ ಬೋಳಿಯಾರ್, ಡಾ.ವಾಜಿದಾ ಬಾನು ಮೊದಲಾದವರು ಕೌನ್ಸೆಲಿಂಗ್ ನಡೆಸಿಕೊಟ್ಟರು.



ಇದೇ ಸಂದರ್ಭದಲ್ಲಿ ದ್ವಿತೀಯ ಪಿಯುಸಿಯಲ್ಲಿ 95%ಕ್ಕಿಂತ ಮೇಲ್ಪಟ್ಟು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅದೇ ರೀತಿ  ಸಿಎ ಮಹಮ್ಮದ್ ಜೌಹರ್ ಅಲಿ ಹಾಗೂ ಅಡ್ವೊಕೇಟ್ ಮೊಹಮ್ಮದ್ ಅಶ್ಪಾಕ್ ಬೋಳಿಯಾರ್ ಅವರನ್ನು ಸನ್ಮಾನಿಸಲಾಯಿತು. ಕಲ್ಲೇಗ ಜುಮಾ ಮಸೀದಿಯ ಅಧ್ಯಕ್ಷರು, ಸಂಯುಕ್ತ ಜಮಾಅತ್ ಅಧ್ಯಕ್ಷರೂ ಆದ ಮಹಮ್ಮದ್ ಹಾಜಿ ಕೆ.ಪಿ, ಮುಸ್ಲಿಂ ಯುವಜನ ಪರಿಷತ್ ಅಧ್ಯಕ್ಷ ಅಶ್ರಫ್ ಕಲ್ಲೇಗ, ಕಬಕ ಹಾಗೂ ಪೋಳ್ಯ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ಸಲೀಂ ಹಾಜಿ, ಇಇಎಫ್ ವಿಟ್ಲ ಇದರ ಕೋಆರ್ಡಿನೇಟರ್ ಉಬೈದ್ ವಿಟ್ಲ, ಅನೀಸ್ ಕಲ್ಲೇಗ ಉಪಸ್ಥಿತರಿದ್ದರು. ಫಹದ್ ಮಂಗಳೂರು, ಆದಿಲ್ ಕೆ.ಎಸ್ ಹಾಗೂ ಶಮ್ನಾ ಕೌಡಿಚ್ಚಾರ್ ರಿಜಿಸ್ಟ್ರೇಶನ್ ವಿಭಾಗವನ್ನು ನಿರ್ವಹಿಸಿ ಸಹಕರಿಸಿದರು.



ಮೊದಲ ಹಂತದ ಕೌನ್ಸೆಲಿಂಗ್‌ನಲ್ಲಿ 75 ವಿದ್ಯಾರ್ಥಿಗಳು ಭಾಗವಹಿಸಿದ್ದು ಎರಡನೇ ಹಂತದ ಕೌನ್ಸೆಲಿಂಗ್ ಶೀಘ್ರದಲ್ಲೇ ನಡೆಯಲಿದೆ ಎಂದು ಎಜುಕೇಶನಲ್ ಎಕ್ಸಲೆನ್ಸ್ ಫೌಂಡೇಶನ್‌ನ ಅಧ್ಯಕ್ಷ ಅಮ್ಜದ್ ಖಾನ್ ಪೋಳ್ಯ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!