ಪರ್ಪುಂಜ : ಕಾರುಗಳ ಮಧ್ಯೆ ಡಿಕ್ಕಿ
ಪುತ್ತೂರು: ಕಾರುಗಳ ಮಧ್ಯೆ ಡಿಕ್ಕಿ ಸಂಭವಿಸಿದ ಘಟನೆ ಕುಂಬ್ರ ಸಮೀಪದ ಪರ್ಪುಂಜ ದಲ್ಲಿ ಅ. 6ರಂದು ನಡೆದಿದೆ.
ಕುಂಬ್ರದಿಂದ ಪುತ್ತೂರಿಗೆ ತೆರಳುತ್ತಿದ್ದ ಮಡಿಕೇರಿಯ ಲೋಕೇಶ್ ಚಲಾಯಿಸುತ್ತಿದ್ದ ಸ್ವಿಫ್ಟ್ ಕಾರಿಗೆ ಹಿಂಬದಿಯಿಂದ ಬರುತ್ತಿದ್ದ ರಾಮಕುಂಜದ ದೀಕ್ಷಿತ್ ಎಂಬವರು ಚಲಾಯಿಸುತ್ತಿದ್ದ ಸೆಲಾರಿಯೋ ಕಾರು ಡಿಕ್ಕಿ ಹೊಡೆದಿದೆ. ಸೆಲಾರಿಯೋ ಕಾರಿನ ಮುಂಭಾಗ ನಜ್ಜುಗುಜ್ಜಾಗಿದ್ದು ಯಾವುದೇ ಅಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.