ಕರಾವಳಿ

ಎ.19: ಎಜುಕೇಶನಲ್ ಎಕ್ಸಲೆನ್ಸ್ ಫೌಂಡೇಶನ್’ನಿಂದ ವಿದ್ಯಾರ್ಥಿ ವೇತನಕ್ಕಾಗಿ ಕೌನ್ಸೆಲಿಂಗ್

ಪುತ್ತೂರು: ಎಜುಕೇಶನಲ್ ಎಕ್ಸಲೆನ್ಸ್ ಫೌಂಡೇಶನ್ (EEF) ವತಿಯಿಂದ ನೀಡಲ್ಪಡುವ ವಿದ್ಯಾರ್ಥಿ ವೇತನಕ್ಕೆ ಆಯ್ಕೆ ಪ್ರಕ್ರಿಯೆಯ ಮೊದಲ ಹಂತವಾಗಿ ವಿದ್ಯಾರ್ಥಿಗಳಿಗೆ ವಿಶೇಷ ಕೌನ್ಸೆಲಿಂಗ್ ಸೆಷನನ್ನು ಏಪ್ರಿಲ್ 19ರಂದು ನೆಹರು ನಗರದ ಕಲ್ಲೇಗ ಜುಮಾ ಮಸೀದಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 1:30 ರ ವರೆಗೆ ಕೌನ್ಸೆಲಿಂಗ್ ನಡೆಯಲಿದ್ದು ನೋಂದಣಿ ಮಾಡಿದ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಪಿಯುಸಿ ನಂತರದ ಕೋರ್ಸುಗಳನ್ನು ಕಲಿಯುತ್ತಿರುವ/ಕಲಿಯಲು ಇಚ್ಚಿಸುವ ವಿದ್ಯಾರ್ಥಿಗಳು ಮಾತ್ರ ಭಾಗವಹಿಸಬಹುದಾಗಿದೆ. 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಫಲಿತಾಂಶ ಬಂದ ಕೂಡಲೇ ಎರಡನೇ ಸುತ್ತಿನ ಕೌನ್ಸಿಲಿಂಗ್ ನಡೆಸಲಾಗುವುದು.

ಇದಲ್ಲದೆ, ವಿದ್ಯಾರ್ಥಿವೇತನ ಆಯ್ಕೆಗಳು, ಅರ್ಹತಾ ಮಾನದಂಡಗಳು ಮತ್ತು ಆಯ್ಕೆ ಪ್ರಕ್ರಿಯೆಯ ಕುರಿತು ಪ್ರಮುಖ ಪ್ರಕಟಣೆಗಳನ್ನು ಕೌನ್ಸೆಲಿಂಗ್ ಸಮಯದಲ್ಲಿ ಮಾಡಲಾಗುತ್ತದೆ. ಎಲ್ಲಾ ವಿದ್ಯಾರ್ಥಿಗಳು ತಮ್ಮ ಹೆತ್ತವರ ಜೊತೆಯಲ್ಲಿ ಭಾಗವಹಿಸಲು ಮತ್ತು ಈ ಅವಕಾಶವನ್ನು ಸದುಪಯೋಗಪಡಿಸಲು ಇಇಎಫ್ ಸಂಸ್ಥೆ ಪ್ರಕಟಣೆ ಹೊರಡಿಸಿದ್ದು ಕೌನ್ಸೆಲಿಂಗ್ ಸೆಷನ್‌ಗಾಗಿ ನಿಮ್ಮ ಸೀಟನ್ನು ಖಚಿತಪಡಿಸಲು, ಈ ಕೆಳಗೆ ನೀಡಿರುವ ನಮೂನೆಯಲ್ಲಿ ಈ ಕೆಳಗಿನ👇 ವಿವರಗಳನ್ನು ಸಲ್ಲಿಸಬೇಕಾಗಿದೆ
ಹೆಸರು:
ಸ್ಥಳ:
ಸ್ಟ್ರೀಮ್:
ಶೇಕಡಾ ಅಂಕ:
+91 99453 59565
Send message to this number WhatsApp messages only no calls.

Leave a Reply

Your email address will not be published. Required fields are marked *

error: Content is protected !!