ಕರಾವಳಿ

ಎ.6: ಶಾಸಕ ಅಶೋಕ್ ರೈ ನೇತೃತ್ವದಲ್ಲಿ ‘ಪೈನ್ ಕಿಲ್ಲರ್ ತ್ಯಜಿಸಿ -ಕಿಡ್ನಿ ರಕ್ಷಿಸಿ-ಜೀವ ಉಳಿಸಿ’ ಆಂದೋಲನ

ಪುತ್ತೂರು: “ಪೈನ್ ಕಿಲ್ಲರ್ ತ್ಯಜಿಸಿ-ಕಿಡ್ನಿ ರಕ್ಷಿಸಿ-ಜೀವ ಉಳಿಸಿ”
ಎಂಬ ಜನಜಾಗೃತಿ  ಕಾರ್ಯಕ್ರಮ ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ  ಎ.6ರಂದು ಸಂಜೆ 3:30 ಗಂಟೆಗೆ ಸರಿಯಾಗಿ ದರ್ಬೆ ಸರ್ಕಲ್ ಬಳಿಯಿಂದ  ಬೊಳ್ವಾರ್ ವರೆಗೆ ಶಾಲಾ ಮಕ್ಕಳ ಜಾಥಾದೊಂದಿಗೆ ನಡೆಯಲಿದೆ.

ರಾಜ್ಯದಲ್ಲಿ, ಅದರಲ್ಲೂ ಪುತ್ತೂರಿನಲ್ಲಿ ಕಿಡ್ನಿರೋಗಿಗಳ ಸಂಖ್ಯೆ ಹೆಚ್ಚುತಿರುವುದಕ್ಕೆ ಶಾಸಕ ಅಶೋಕ್ ರೈ ಅವರು ಕಾರಣ ಹುಡುಕಿದಾಗ ಪೈನ್ ಕಿಲ್ಲರ್ ಔಷಧಿಗಳು ಎಂಬುವುದು  ಮನವರಿಕೆಯಾಗಿದೆ. ಹಾಗಾಗಿ  ವೈದ್ಯರ ಸಲಹೆ ಇಲ್ಲದೆ ಔಷಧಿಗಳನ್ನು ಸೇವಿಸುವುದು ದೇಹಕ್ಕೆ ಹಾನಿಕಾರ ಎಂಬ ವಿಷಯದ ಬಗ್ಗೆ ಜನರಿಗೆ ತಿಳಿಸಲು ಮತ್ತು ವೈದ್ಯರ  ಚೀಟು ಇಲ್ಲದೆ ಔಷಧಿಗಳನ್ನು ಕೊಡುವುದನ್ನು  ನಿಷೇಧಿಸಬೇಕೆಂದು ಮೆಡಿಕಲ್ ನವರಿಗೆ ಮನವಿ ಮಾಡುವ ಮೂಲಕ  ಜನಸಾಮಾನ್ಯರ ಜೀವ ರಕ್ಷಣೆಯ ಮಾಹಿತಿ ಮುಟ್ಟಿಸುವ ಸಲುವಾಗಿ ಕಾರ್ಯಕ್ರಮವನ್ನು ಶಾಸಕರು ರೂಪಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!