ಒಪ್ಪಂದಕ್ಕೆ ಇರಾನ್‌ಗೆ 48 ಗಂಟೆಗಳ ಗಡುವು ನೀಡಿದ ಟ್ರಂಪ್
ವಾಷಿಂಗ್ಟನ್: ಹಾರ್ಮುಜ್ ಜಲಸಂಧಿಯನ್ನು ತೆರೆಯುವ ಕುರಿತು ಒಪ್ಪಂದ ಮಾಡಿಕೊಳ್ಳುವುದು ಅಥವಾ ನರಕದರ್ಶನ, ಈ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಲು ಇರಾನ್‌ಗೆ 48 ಗಂಟೆಗಳ ಅವಧಿ ಉಳಿದಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

‘ನಾನು ಒಪ್ಪಂದ ಮಾಡಿಕೊಳ್ಳಲು 10 ದಿನಗಳ ಗಡುವು ನೀಡಿದ್ದನ್ನು ನೆನಪಿಸಿಕೊಳ್ಳಿ. ಸಮಯ ಮೀರುತ್ತಿದೆ. ಈಗ ಕೇವಲ 48 ಗಂಟೆ ಮಾತ್ರ ಉಳಿದಿದೆ’ ಎಂದು ಟ್ರಂಪ್ ಹೇಳಿದ್ದಾರೆ.



