ಶಾಂತಿ ಒಪ್ಪಂದಕ್ಕೆ ಮಧ್ಯಸ್ಥಿಕೆ ವಹಿಸಲು ಸಿದ್ಧ: ರಷ್ಯಾ
:ಮಧ್ಯಪ್ರಾಚ್ಯದಲ್ಲಿನ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಶಾಂತಿ ಮಾತುಕತೆಗೆ ಮಧ್ಯಸ್ಥಿಕೆ ವಹಿಸಲು ಸಿದ್ಧವಿರುವುದಾಗಿ ರಷ್ಯಾ ಹೇಳಿದೆ.ಘೋಷಿಸಿದೆ.
ಆಕ್ರಮಣ ಮತ್ತು ದಾಳಿಗಳ ಸಂಪೂರ್ಣ ಮತ್ತು ನಿರ್ಣಾಯಕ ನಿಲುಗಡೆ, ಆಕ್ರಮಣ ಅಥವಾ ಯುದ್ಧದ ಪುನರಾರಂಭವನ್ನು ತಡೆಗಟ್ಟಲು ವಸ್ತುನಿಷ್ಠ ಮತ್ತು ವಿಶ್ವಾಸಾರ್ಹ ಖಾತರಿ ಒದಗಿಸುವುದು, ವಸ್ತು ಮತ್ತು ನೈತಿಕ ಹಾನಿಗಳಿಗೆ ಸಂಪೂರ್ಣ ಪರಿಹಾರ, ಅಂತರರಾಷ್ಟ್ರೀಯ ಕಡಲ ಭದ್ರತೆಯನ್ನು ಖಾತರಿಪಡಿಸುವ ಉದ್ದೇಶಕ್ಕಾಗಿ ಹಾರ್ಮುಜ್ ಜಲಸಂಧಿಯಲ್ಲಿ ಇರಾನ್‌ನ ಅಧಿಕಾರ ವ್ಯಾಪ್ತಿಯನ್ನು ಗೌರವಿಸಬೇಕು ಎಂದು ರಷ್ಯಕ್ಕೆ ಇರಾನ್‌ನ ರಾಯಭಾರಿ ಆಗ್ರಹಿಸಿರುವುದಾಗಿ ರಷ್ಯಾದ ಸುದ್ದಿಸಂಸ್ಥೆ ವರದಿ ಮಾಡಿದೆ.



