ಕರಾವಳಿಕ್ರೈಂ

ಕೊಕ್ಕಡ: ಯುವಕನ ಮೇಲೆ ಹಲ್ಲೆ, ಪ್ರಕರಣ ದಾಖಲು


ಬೆಳ್ತಂಗಡಿ: ಯುವಕನ ಮೇಲೆ ಹಲ್ಲೆ ನಡೆದ ಘಟನೆ ಕೊಕ್ಕಡದಲ್ಲಿ ನಡೆದಿದೆ. ಹಣಕಾಸಿನ ವಿಚಾರವಾಗಿ ಉಂಟಾದ ತಕರಾರಿನ ಹಿನ್ನೆಲೆಯಲ್ಲಿ ಬಾರ್‌ವೊಂದರಲ್ಲಿ ಯುವಕನ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿರುವ ಘಟನೆ ನಡೆದಿದೆ.


ಕೊಕ್ಕಡ ಗ್ರಾಮದ ನಿವಾಸಿ ಅಕ್ಷಯ್‌ (31) ಹಲ್ಲೆಗೊಳಗಾದ ವ್ಯಕ್ತಿ. ಇವರು ಮಾ.29ರಂದು ರಾತ್ರಿ ಕೊಕ್ಕಡದ ಬಾರ್‌ ಎಂಡ್‌ ರೆಸ್ಟೋರೆಂಟ್‌ ನಲ್ಲಿದ್ದ ವೇಳೆ ಅಲ್ಲಿಗೆ ಬಂದ ಯತೀಶ್‌, ಹಳೆಯ ಹಣಕಾಸಿನ ವಿಚಾರವನ್ನು ತೆಗೆದು ಅಕ್ಷಯ್‌ ಜೊತೆ ಜಗಳವಾಡಿದ್ದರು ಎನ್ನಲಾಗಿದೆ. ಈ ವೇಳೆ ಯತೀಶ, ಧನುಷ್‌ ಭಂಡಾರಿ, ಶರತ್‌ ಭಂಡಾರಿ ಮತ್ತು ಪ್ರವೀಣ್‌ ಎಂಬುವವರು ಸೇರಿಕೊಂಡು ಅಕ್ಷಯ್‌ಗೆ ಅವಾಚ್ಯವಾಗಿ ಬೈದು, ಹಲ್ಲೆ ನಡೆಸಿ, ಜೀವಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಕ್ಷಯ್ ನೀಡಿರುವ ದೂರಿನ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!