ಕರಾವಳಿ

ಸುಳ್ಯ: ಬೈಕ್ ಮರಕ್ಕೆ ಡಿಕ್ಕಿ-ಸವಾರ ಸಾವು


ಸುಳ್ಯ: ಬೈಕ್ ಚಾಲನೆಯ ವೇಳೆ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರರೊಬ್ಬರು ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕೊಲ್ಚಾರ್ ಬಳಿ ಸೋಮವಾರ ರಾತ್ರಿ ಸಂಭವಿಸಿದೆ.

ಸಾಂದರ್ಭಿಕ ಚಿತ್ರ


ಮೃತರನ್ನು ಕಾಸರಗೋಡು ಮೂಲದ ಶ್ರೀಧರ್ (38 ವ) ಎಂದು ಗುರುತಿಸಲಾಗಿದೆ. ಇವರು ಸೋಮವಾರ ರಾತ್ರಿ ತಮ್ಮ ಮೋಟಾರ್ ಸೈಕಲ್‌ನಲ್ಲಿ ಆಲೆಟ್ಟಿ ಗ್ರಾಮದ ಕೊಲ್ಚಾರ್ ಬಸ್ ನಿಲ್ದಾಣದ ಸಮೀಪ ಸಂಚರಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.

ಅಪಘಾತದ ತೀವ್ರತೆಗೆ ಶ್ರೀಧರ್ ಅವರಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದರು. ಈ ಬಗ್ಗೆ ಮೃತರ ಸಹೋದರ ರಾಧಕೃಷ್ಣ ಪಿ.ಎಂ (49 ವರ್ಷ) ಅವರು ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದು ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!