ಹಲವು ಗಂಭೀರ ಪ್ರಕರಣಗಳ ಆರೋಪಿ ನಜೀಮ್ ಬಂಧನ
ಮಂಗಳೂರು:ಬಂಟ್ವಾಳ ತಾಲೂಕು ನರಿಗಾನ ಗ್ರಾಮದ ಪಟ್ಟುಲಿಕೆ ವಾಸವಾಗಿರುವ ನಜೀಮ್ @ ನಜ್ಜು (30), ಮೇಲೆ ಕೊಣಾಜೆ, ಉಳ್ಳಾಲ, ಮಂಗಳೂರು ನಾರ್ತ್, ಬೇಗೂರು ಬೆಂಗಳೂರು ನಗರ, ಭಟ್ಕಳ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದು, ಆರೋಪಿ ಜಾಮೀನು ಪಡೆದ ಬಳಿಕ ಒಂದುವರೆ ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೇ ಪರಾರಿಯಾಗಿದ್ದ. ನಜೀಮ್ ವಿರುದ್ಧ ಹೊರಡಿಸಲಾಗಿದ್ದ ವಾರೆಂಟ್ ಹಾಗೂ ಪ್ರೋಕ್ಲಮೇಷನ್ ಬಾಕಿ ಇದ್ದ ಹಿನ್ನೆಲೆಯಲ್ಲಿ, ವಿಶೇಷ ಕ್ರಮ ಕೈಗೊಂಡು ಆರೋಪಿಯನ್ನು ಬೆಂಗಳೂರು ನಗರದಿಂದ ಪತ್ತೆಹಚ್ಚಿ ಬಂಧಿಸಲಾಗಿದೆ.

ಆರೋಪಿಯನ್ನು ಮಂಗಳೂರು ದಕ್ಷಿಣ ಉಪ ಆಯುಕ್ತರವರ ಮಾರ್ಗದರ್ಶನದಲ್ಲಿ ಕೊಣಾಜೆ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಭಂದಿಗಳಾದ ದಿನೇಶ್, ಶರೀಫ್ ಮತ್ತು ರಮೇಶ್ ಅವರ ಶ್ರಮದಿಂದ ಬೆಂಗಳೂರು ನಗರದಿಂದ ಬಂಧಿಸಲಾಗಿದೆ.