ಮಂಗಳೂರು: ಮಾದಕ ವಸ್ತು ಸೇವನೆ, ಐದು ಮಂದಿ ಯುವಕರ ಬಂಧನ
ಮಂಗಳೂರು: ಮಾದಕ ವಸ್ತು ಸೇವನೆ ಆರೋಪದಡಿ ಐದು ಮಂದಿಯನ್ನು ಉರ್ವ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಚಿಲಿಂಬಿ ಮಲರಾಯ ದೈವಸ್ಥಾನ ಬಳಿಯ ಲೇಔಟ್ ನಲ್ಲಿ ಮಾದಕ ವಸ್ತು ಸೇವಿಸುತ್ತಿದ್ದ ಆರೋಪದಡಿ ಕೇರಳ ಮೂಲದ ಅಜಿಲ್ ಸಾಜಿ(21), ಸಾಜಿಲ್ ಅಬ್ದುಲ್ ಸಮದ್ (21), ಅಬು ಥಾಮಸ್ (23), ಮೆಲ್ಲನ್ ಟೆಲ್ಲಿಸ್ (19) ಹಾಗೂ ಅಶ್ವಿನ್ ಸಾಜಿ (20), ಎಂಬವರನ್ನು ಉರ್ವ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.



