ಕರಾವಳಿ

ಮಂಗಳೂರು: ಮಕ್ಕಳ ಅಪಹರಣ ವದಂತಿ- ಪೊಲೀಸ್ ಸ್ಪಷ್ಟನೆ


ಮಂಗಳೂರು: ನಗರದ  ಕುಂಟಿಕಾನ ಬಳಿ ಮಕ್ಕಳ ಅಪಹರಣ ತಂಡದ ಬಗ್ಗೆ ಶುಕ್ರವಾರ ಬೆಳಿಗ್ಗೆ ವೈರಲ್ ಆದ ವದಂತಿ ಸಾರ್ವಜನಿಕರಲ್ಲಿ ಭೀತಿ ಉಂಟು ಮಾಡಿತ್ತು. ಆದರೆ, ಕದ್ರಿ ಪೊಲೀಸರು ಸಮಗ್ರ ತನಿಖೆಯ ನಂತರ, ಈ ವರದಿಗಳು ಸಂಪೂರ್ಣವಾಗಿ ಆಧಾರರಹಿತ ಎಂದು ಸ್ಪಷ್ಟಪಡಿಸಿದ್ದಾರೆ.


ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುವ ಸಂದೇಶಗಳು ಸಂಪೂರ್ಣ ಸುಳ್ಳಾಗಿವೆ. ಯಾರೂ ಗಾಬರಿಯಾಗಬೇಡಿ ಎಂದು ಎಲ್ಲಾ ರೀತಿಯ ವದಂತಿಗೆ ತೆರೆ ಎಳೆದಿದ್ದಾರೆ.
ಗುರುವಾರ ಸಂಜೆ ಕುಂಟಿಕಾನದ ಬಳಿ ನಡೆದುಕೊಂಡು ಹೋಗುತ್ತಿದ್ದ ಬಾಲಕನೊಬ್ಬ ಅಲ್ಲಿದ್ದ ಆಟೋದಲ್ಲಿ ಮಕ್ಕಳು ಅಳುತ್ತಿರುವುದನ್ನು ಕೇಳಿಸಿಕೊಂಡಿದ್ದ ಸ್ನೇಹಿತನಿಗೆ ಮಕ್ಕಳ ಕಳ್ಳರು ಬಂದಿದ್ದಾರೆ. ಮಕ್ಕಳನ್ನು ಕಿಡ್ನಾಪ್ ಮಾಡುತ್ತಿದ್ದಾರೆ ಎಂದು ಹೇಳಿದ್ದರು. ಬಾಲಕನ ಸ್ನೇಹಿತ ತನ್ನ ಪರಿಚಯದ ಮಹಿಳೆಗೆ ಅದನ್ನು ಹೇಳಿದ್ದಾನೆ.

ಆಕೆ ವಾಟ್ಸ್‌ಆಯಪ್‌ನಲ್ಲಿ ಈ ಬಗ್ಗೆ ವಾಯ್ಸ್ ಮೆಸೇಜ್ ಹಾಕಿದರು. ಜೊತೆಗೆ ಅದನ್ನು ಕೇಳಿದ ಅಂಗನವಾಡಿ ಶಿಕ್ಷಕಿಯೂ ಕೂಡ ಎಲ್ಲರೂ ಎಚ್ಚರದಿಂದ ಇರುವಂತೆ ವಾಯ್ಸ್ ಮೆಸೇಜ್ ಹಾಕಿದ್ದರು. ಇದು ಎಲ್ಲಾ ಗುಂಪುಗಳಲ್ಲಿ ಹರಿದಾಡಿದ ಪರಿಣಾಮ ಸ್ಥಳೀಯ ಜನರು ಗಾಬರಿಗೊಳಾಗಿದ್ದರು. ಈ ಪರೀಕ್ಷೆ ನಡೆಸಿದ ತನಿಖೆ ನಡೆಸಿದ ಹುಡುಗನನ್ನು ವಿಚಾರಣೆ ನಡೆಸಿ ಬಳಿಕ ವದಂತಿ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!