ಕರಾವಳಿರಾಷ್ಟ್ರೀಯ

ಸೆಂಟ್ರಲ್ ಇಂಟೆಲಿಜೆನ್ಸಿ ಕಚೇರಿಗೆ  ಪುತ್ತೂರಿನಲ್ಲಿ ನಿವೇಶನ ಮಂಜೂರು: ವರ್ಷದೊಳಗೆ ಪುತ್ತೂರಿನಲ್ಲಿ ಕಚೇರಿ  ಆರಂಭ: ಶಾಸಕ ಅಶೋಕ್ ರೈ



ಪುತ್ತೂರು: ಕೇಂದ್ರ ಸರಕಾರದ ಅಧೀನಕ್ಕೊಳಪಡುವ  ಸೆಂಟ್ರಲ್ ಇಂಟೆಲಿಜೆನ್ಸಿ ಸಂಸ್ಥೆಗೆ ಕಚೇರಿ ಆರಂಭಕ್ಕೆ  ಪುತ್ತೂರಿನಲ್ಲಿ ನಿವೇಶನ ಮಂಜೂರು ಮಾಡಲಾಗಿದ್ದು  ಮುಂದಿನ ಒಂದು ವರ್ಷದೊಳಗೆ ಇಂಟೆಲಿಜೆನ್ಸಿ ಕಚೇರಿ  ಪ್ರಾರಂಭಗೊಳ್ಳಲಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದರು.

ಪುತ್ತೂರು ನಗರದ ಪಡ್ನೂರಿನಲ್ಲಿ ೦.೪೪ ಸೆಂಟ್ಸ್ ಜಾಗವನ್ನು ಮಂಜೂರು ಮಾಡಲಾಗಿದೆ. ಕಳೆದ ಎರಡು ತಿಂಗಳ ಹಿಂದೆ ಇಂಟೆಲಿಜೆನ್ಸಿ ಎಸ್ ಪಿಯವರು ತಮ್ಮ ಬಳಿ ಬಂದು ಕಚೇರಿ  ಆರಂಭಕ್ಕೆ ನಿವೇಶನ ಮಂಜೂರು ಮಾಡುವಂತೆ ಮನವಿ ಮಾಡಿದ್ದರು. ಪಡ್ನೂರಿನಲ್ಲಿ ಈ ಜಾಗವನ್ನು ನೀಡಲಾಗಿದೆ.  ಪುತ್ತೂರಿನಲ್ಲಿಯೂ ಕೇಂದ್ರ ಸರಕಾರದ ಅಧೀನಕ್ಕೊಳಪಡುವ ಗುಪ್ತಚರ ಇಲಾಖೆಯ ಕಚೇರಿ ಪ್ರಾರಂಭವಾಗುವುದಕ್ಕೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದೇವೆ. ಮುಂದಿನ ದಿನಗಳಲ್ಲಿ  ಇಲಾಖೆಯೇ ಕಚೇರಿ ನಿರ್ಮಾಣ ಕಾಮಗಾರಿಯನ್ನು  ನಡೆಸುತ್ತದೆ ಎಂದು ಶಾಸಕರು ತಿಳಿಸಿದರು. ಇದೇ  ಸಂದರ್ಭದಲ್ಲಿ ನಿವೇಶನಕ್ಕೆ ಸಂಬಂದಿಸಿದ ಪಹಣಿ ಪತ್ರವನ್ನು ಅಧಿಕಾರಿಗೆ ಶಾಸಕರು ಹಸ್ತಾಂತರಿಸಿದರು.  ತಹಶಿಲ್ದಾರ್ ಕೂಡ್ಲಿಗಿ ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *

error: Content is protected !!