ಕರಾವಳಿಕ್ರೈಂ

ಸಂಪಾಜೆ: ಸರಣಿ ಅಪಘಾತ, ಟಿಪ್ಪರ್‌ನಡಿಗೆ ಸಿಲುಕಿ ಆಟೊ ಚಾಲಕ ಮೃತ್ಯು


ಸುಳ್ಯ: ಕಾರು-ಆಟೊ ರಿಕ್ಷಾ ನಡುವೆ ಸಂಭವಿಸಿದ ಅಪಘಾತದಲ್ಲಿ ಆಟೋ ರಿಕ್ಷಾ ಪಲ್ಟಿ ಯಾಗಿದ್ದು, ಈ ವೇಳೆ ರಸ್ತೆಗೆ ಎಸೆಯಲ್ಪಟ್ಟ ಚಾಲಕ ಮುಂದಿನಿಂದ ಬರುತ್ತಿದ್ದ ಟಿಪ್ಪರ್‌ನ ಚಕ್ರದಡಿ ಸಿಲುಕಿ ಮೃತಪಟ್ಟ ಘಟನೆ ಗುರುವಾರ ಕೊಡಗು ಸಂಪಾಜೆಯ ಚೆಡಾವು ಬಳಿ ಸಂಭವಿಸಿದೆ.

ಬಿಸಿಲುಮನೆ ದಿ.ರಾಮಣ್ಣ ಗೌಡರ ಪುತ್ರ ಸುಂದರ ಚಿಟ್ಟಿಕ್ಕಾನ (56) ಮೃತಪಟ್ಟವರು.

ಸಂಪಾಜೆ ಗೇಟ್‌ ನಿಂದ ಚೆಡಾವು ಕಡೆ ತೆರಳುತ್ತಿದ್ದ ಆಟೊ ರಿಕ್ಷಾಕ್ಕೆ ಸಂಪಾಜೆ ಪೆಟ್ರೋಲ್ ಪಂಪ್ ಬಳಿಯ ತಿರುವಿನಲ್ಲಿ ಅತೀ ವೇಗದಿಂದ ಹಿಂದಿನಿಂದ ಬಂದ ಕಾರು ಢಿಕ್ಕಿ ಹೊಡೆದು ಸ್ಥಳದಲ್ಲಿ ನಿಲ್ಲಿಸದೇ ಮಡಿಕೇರಿ ಕಡೆಗೆ ಪರಾರಿಯಾಗಿದೆ. ಈ ವೇಳೆ ರಸ್ತೆಗೆಸೆಯಲ್ಪಟ್ಟ ರಿಕ್ಷಾ ಚಾಲಕ ಮುಂಭಾಗದಲ್ಲಿ ವಿರುದ್ದ ದಿಕ್ಕಿನಿಂದ ಬರುತ್ತಿದ್ದ ಟಿಪ್ಪರ್ ಲಾರಿಯ ಚಕ್ರದಡಿ ಸಿಲುಕಿ ಮೃತಪಟ್ಟರು. ಆಟೋದಲ್ಲಿದ್ದ ಇನ್ನೋರ್ವ ಪ್ರಯಾಣಿಕ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮೃತರು ಪತ್ನಿ, ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.



Leave a Reply

Your email address will not be published. Required fields are marked *

error: Content is protected !!