ಕರಾವಳಿರಾಜ್ಯ

ಸಾಮಾಜಿಕ ಅರಣ್ಯ ಮರ ಕಟಾವಿಗೆ ಅರಣ್ಯ ಸಚಿವರಿಗೆ ಶಾಸಕ ಅಶೋಕ್ ರೈ ಮನವಿ


ಪುತ್ತೂರು: ಮುಂಡೂರು ಗ್ರಾಮದಲ್ಲಿ ನೂತನವಾಗಿ ಆರಂಭವಾಗಲಿರುವ ಆರ್ ಟಿ ಒ ಟ್ರ್ಯಾಕ್ ಮತ್ತು ಬಜತ್ತೂರಿನಲ್ಲಿ ನಿರ್ಮಾಣವಾಗಲಿರುವ ಅಂಬೇಡ್ಕರ್ ವಸತಿ ಶಾಲೆಗೆ ನಿಗದಿ ಮಾಡಲಾದ ಜಾಗದಲ್ಲಿ ಸಾಮಾಜಿಕ ಅರಣ್ಯ ಇಲಾಖೆಯ ಮರಗಳು ಇದ್ದು ಅದನ್ನು ಕಟಾವಿಗೆ ಆದೇಶ ಮಾಡುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಶಾಶಕ ಅಶೋಕ್ ರೈ ಮನವಿ ಮಾಡಿದ್ದಾರೆ.


ಗುರುವಾರ ಸಚಿವರನ್ನು ವಿಧಾನಸೌಧ ಕಚೇರಿಯಲ್ಲಿ ಭೇಟಿಯಾದ ಶಾಸಕರು ಬಜತ್ತೂರಿನಲ್ಲಿ ಅಂಬೇಡ್ಕರ್ ವಸತಿ ಶಾಲೆ ನಿರ್ಮಾಣವಾಗಲಿದೆ. ವಸತಿ ಶಾಲೆಗೆ ನಿಗದಿ ಮಾಡಲಾದ ಸರಕಾರಿ ಜಾಗದಲ್ಲಿ ಸಾಮಾಜಿಕ ಅರಣ್ಯ ಇಲಾಖೆಗೊಳಪಟ್ಟ ಮರಗಳಿದ್ದು ಅವುಗಳನ್ನು ಕಟಾವು ಮಾಡಬೇಕಾದ ಅವಶ್ಯಕತೆ ಇದೆ. ಕಟ್ಟಡ ನಿರ್ಮಾಣ ಮಾಡುವಷ್ಟು ಜಾಗದಲ್ಲಿ ಮಾತ್ರ ಮರಗಳನ್ನು ಕಟಾವು ಮಾಡುವಂತೆ ಸಚಿವಾಲಯದಿಂದ ಆದೇಶ ಅಗತ್ಯವಿದ್ದು ಇಲಾಖೆಗೆ ಸೂಚನೆ ನೀಡುವಂತೆ ಶಾಸಕರು ಮನವಿ ಮಾಡಿದ್ದಾರೆ.


ಮುಂಡೂರಿನಲ್ಲಿ ಆರ್ ಟಿ ಒ ಟ್ರ್ಯಾಕ್ ನಿರ್ಮಾಣಕ್ಕೆ ನಿಗದಿ ಮಾಡಲಾದ ಜಾಗದಲ್ಲಿಯೂ ಸಾಮಾಜಿಕ ಅರಣ್ಯ ಇಲಾಖೆ ವ್ಯಾಪ್ತಿಗೆ ಸೇರಿದ ಮರಗಳಿದ್ದು ಅವುಗಳನ್ನು ಕಟಾವು ಮಾಡಲು ಆದೇಶ ಮಾಡುವಂತೆ ಸಚಿವರಿಗೆ ಮನವಿ ಮಾಡಿದ್ದಾರೆ. ಶಾಸಕರ ಮನವಿಗೆ ಸಚಿವರು ಪೂರಕ ಸ್ಪಂದನೆ ನೀಡಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!