ಆಲಂಕಾರು: ತೋಟದಿಂದ ಅಡಕೆ ಕಳವು
ಉಪ್ಪಿನಂಗಡಿ: ಕಡಬ ತಾಲೂಕಿನ ಆಲಂಕಾರು ಗ್ರಾಮದ ಶಾಂತಿಮೊಗರು ಎಂಬಲ್ಲಿ ತೋಟದಿಂದ ಅಡಕೆ ಕಳವು ಮಾಡಿರುವ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸತೀಶ್ ಎಂಬವರು ನೀಡಿದ ದೂರಿನಂತೆ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸತೀಶ್ ಅವರು ಶನಿವಾರ ತಡ ರಾತ್ರಿ ತೋಟಕ್ಕೆ ನೀರು ಹಾಯಿಸುವ ವೇಳೆ ಯಾರೋ ಮಾತನಾಡುವ ಶಬ್ದ ಕೇಳಿ ಟಾರ್ಚ್ ಲೈಟ್ ನಂದಿಸಿ ಹತ್ತಿರ ಹೋದಾಗ, ಇಬ್ಬರು ವ್ಯಕ್ತಿಗಳು ತೋಟದಿಂದ ಕಳವು ಮಾಡಿದ ಅಡಿಕೆಯನ್ನು ತೆಗೆದುಕೊಂಡು ಓಡಿ ಹೋಗಿ, ತೋಟದ ಬೇಲಿಯ ಹೊರಗೆ ನಿಲ್ಲಿಸಿದ್ದ ದ್ವಿಚಕ್ರ ವಾಹನದಲ್ಲಿ ಹಾಕಿ ಪರಾರಿಯಾಗಿದ್ದಾರೆ. ಕಳವಾದ ಅಡಿಕೆ ಅಂದಾಜು ರೂ.15,000/- ಆಗಬಹುದು ಎಂದು ದೂರಿನಲ್ಲಿ ತಿಳಿಸಿದ್ದಾರೆ.





