ಎಜುಕೇಶನಲ್ ಎಕ್ಸಲೆನ್ಸ್ ಫೌಂಡೇಶನ್ ವತಿಯಿಂದ ಕೌನ್ಸೆಲಿಂಗ್
ಪುತ್ತೂರು: ಎಜುಕೇಶನಲ್ ಎಕ್ಸಲೆನ್ಸ್ ಫೌಂಡೇಶನ್ ವತಿಯಿಂದ ಸಂಸ್ಥೆಯಲ್ಲಿ ನೋಂದಾವಣೆ ಮಾಡಿರುವ ಉನ್ನತ ವಿದ್ಯಾಭ್ಯಾಸ ಬಯಸುವ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ಮೇ.9ರಂದು ಪುತ್ತೂರು ಲಯನ್ಸ್ ಸೇವಾ ಭವನದಲ್ಲಿ ನಡೆಯಿತು.

ಖ್ಯಾತ ತರಬೇತುದಾರರಾದ ರಫೀಕ್ ಮಾಸ್ಟರ್, ಡಾ.ವಾಜಿದ, ನ್ಯಾಯವಾದಿ ಕೆ.ಎಂ ಸಿದ್ದೀಕ್ ಹಾಗೂ ಚಾರ್ಟರ್ಡ್ ಅಕೌಂಟೆಂಟ್ ಮುಹಮ್ಮದ್ ಜೌಹರ್ ಅಲಿ ಕೌನ್ಸೆಲಿಂಗ್ ನಡೆಸಿಕೊಟ್ಟರು.
ಮೊದಲ ಹಂತದ ಕೌನ್ಸೆಲಿಂಗ್ ನಲ್ಲಿ 54 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎರಡನೇ ಹಂತದ ಕೌನ್ಸೆಲಿಂಗ್ ಶೀಘ್ರದಲ್ಲೇ ನಡೆಯಲಿದೆ ಎಂದು ಎಜುಕೇಶನಲ್ ಎಕ್ಸಲೆನ್ಸ್ ಫೌಂಡೇಶನ್ ನ ಅಧ್ಯಕ್ಷ ಅಮ್ಜದ್ ಖಾನ್ ಪೋಳ್ಯ ತಿಳಿಸಿದ್ದಾರೆ.