ಮುಂದಿನ ಮೂರು ವರ್ಷದಲ್ಲಿ ಪುತ್ತೂರಿನಲ್ಲಿ 30 ಸಾವಿರ ಉದ್ಯೋಗ ಸೃಷ್ಟಿ-ಅಶೋಕ್ ರೈ
ಪುತ್ತೂರು: ಚುನಾವಣಾ ಸಮಯದಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಜನರಿಗೆ ನಾನಾ ಭರವಸೆಗಳನ್ನು ನೀಡುತ್ತಾರೆ, ಆದರೆ ಚುನಾವಣೆಯ ಬಳಿಕ ಅದನ್ನು ಪೂರ್ಣವಾಗಿ ಮರೆತುಬಿಡುತ್ತಾರೆ,ಕೊಟ್ಟ ಮಾತನ್ನು ಉಳಿಸಿಕೊಳ್ಳದಿದ್ದಲ್ಲಿ ಜನ ಗೌರವ ಕೊಡುವುದಿಲ್ಲ ಎಂದು ಶಾಸಕ ಅಶೋಕ್ ರೈ ಹೇಳಿದರು.
ಅವರು ಪಾಣಾಜೆ ಸೇವಾ ಸಹಕಾರಿ ಸಂಘದ ಸಭಾ ಭವನದಲ್ಲಿ ನಡೆದ ತಾಲೂಕು ಮಟ್ಟದ ಅಕ್ರಮ ಸಕ್ರಮ ಬೈಠಕ್ ಉದ್ಘಾಟಿಸಿ ಮಾತನಾಡಿದರು.

ಕಾಂಗ್ರೆಸ್ ಕಳೆದ ಚುನಾವಣಾ ಸಮಯದಲ್ಲಿ ಪಂಚ ಗ್ಯಾರಂಟಿ ಭರವಸೆ ನೀಡಿತ್ತು ಅಧಿಕಾರವಹಿಸಿದ ಮೂರೇ ತಿಂಗಳಲ್ಲಿ ಅದನ್ನು ಈಡೇರಿಸಿದೆ. ಕಳೆದ ಚುನಾವಣೆಯಲ್ಲಿ ನಾನು ನನ್ನ ಕ್ಷೇತ್ರದ ಜನತೆಗೂ ಭರವಸೆ ನೀಡಿದ್ದೆ. ಐದು ಭರವಸೆಗಳ ಪೈಕಿ ನಾಲ್ಕು ಭರವಸೆ ಈಡೇರಿಸಿದ್ದೇನೆ ಇನ್ನೊಂದು ಬಾಕಿ ಇದ್ದು ಅದು ಪ್ರಗತಿ ಹಂತದಲ್ಲಿದ್ದೆ. ನಾನು ಹೇಳಿದ ಭರವಸೆಯನ್ನು ತೀರಿಸಬೇಕೆಂಬ ಹಂಬಲದಲ್ಲಿದ್ದೇನೆ ಎಂದು ಹೇಳಿದರು. ಪುತ್ತೂರಿಗೆ ಮೆಡಿಕಲ್ ಕಾಲೇಜು, ದೇವಸ್ಥಾನಗಳ ಅಭಿವೃದ್ದಿ, ಅಕ್ರಮ ಸಕ್ರಮ ,94 ಸಿ 94 ಸಿ ಸಿ ಹಕ್ಕು ಪತ್ರವಿತರಣೆ, ನಿವೇಶನ ರಹಿತರಿಗೆ ನಿವೇಶನ ಹಂಚಿಕೆ, ತಾಲೂಕು ಕ್ರೀಡಾಂಗಣ ಸೇರಿದಂತೆ ಹತ್ತು ಹಲವು ಅಭಿವೃದ್ದಿ ಕೆಲಸವನ್ನು ಮಾಡಿದ್ದು ಜನ ಇದನ್ನು ಸ್ವೀಕರಿಸಿದ್ದಾರೆ ಎಂಬ ನಂಬಿಕೆ ಇದೆ ಎಂದು ಶಾಸಕರು ಹೇಳಿದರು.
ಮುಂದಿನ ಮೂರು ವರ್ಷದಲ್ಲಿ ಪುತ್ತೂರಿನಲ್ಲಿ 30 ಸಾವಿರ ಉದ್ಯೋಗ ಸೃಷ್ಟಿಯಾಗಿದೆ. ಮೆಡಿಕಲ್ ಕಾಲೇಜು ನಿರ್ಮಾಣದಲ್ಲಿ 8 ಸಾವಿರ, ಕೆಎಂಎಫ್ ನಿಂದ 7 ಸಾವಿರ ಹಾಗೂ ಆಯುರ್ವೆದ ಕಾಲೇಜು, ಫಿಸಿಯೋಥೆರಫಿ ಕಾಲೇಜು, ಪಶು ವೈದ್ಯಕೀಯ ಕಾಲೇಜು, ಆರ್ ಟಿ ಒ ಟ್ರ್ಯಾಕ್ ಸೇರಿದಂತೆ ಹಲವು ಉದ್ಯಮಗಳು ಪುತ್ತೂರಿಗೆ ಬರಲಿದ್ದು ಇವೆಲ್ಲವೂ ಪುತ್ತೂರಿಗೆ ಬರಲಿದ್ದು ಈ ಮೂಲಕ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಶಾಸಕರು ತಿಳಿಸಿದರು.





