ಡಿ.1: ಮೆಡ್‌ಲ್ಯಾಂಡ್ ಆಸ್ಪತ್ರೆಯಲ್ಲಿ ಹೆರಿಗೆ ಮತ್ತು ಪ್ರಸೂತಿ ಘಟಕ, ನವಜಾತ ಶಿಶುಗಳ ತೀವ್ರ ನಿಗಾ ಘಟಕ ಉದ್ಘಾಟನೆ
ಪುತ್ತೂರು: ಸಂಪ್ಯದಲ್ಲಿರುವ ಮೆಡ್ ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೆರಿಗೆ ಮತ್ತು ಪ್ರಸೂತಿ ಘಟಕ ಹಾಗೂ ನವಜಾತ ಶಿಶುಗಳ ತೀವ್ರ ನಿಗಾ ಘಟ ಕ(ಎನ್‌ಐಸಿಯು) ಇದರ ಉದ್ಘಾಟನಾ ಕಾರ್ಯಕ್ರಮ ಡಿ.1ರಂದು ಬೆಳಗ್ಗೆ ಗಂಟೆ 11ಕ್ಕೆ ನಡೆಯಲಿದೆ. ಜನರಲ್ ಫಿಸಿಶಿಯನ್ ಹಾಗೂ ಮಧುಮೇಹ ತಜ್ಞರಾದ ಡಾ.ಸ್ವಾತಿ.ಪಿ ಅಧ್ಯಕ್ಷತೆ ವಹಿಸಲಿದ್ದು ಕನ್ನಡ ಹಾಗೂ ತುಳು ಚಿತ್ರನಟಿ ಕು. ಚಿರಶಿ ಅಂಚನ್ ಉದ್ಘಾಟಿಸಲಿದ್ದಾರೆ. ಎನ್ಐಸಿಯು ಘಟಕವನ್ನು ಮಕ್ಕಳ ತಜ್ಞರಾದ ಡಾ.ತನ್ವಿ ಸುರೇಂದ್ರ ಪೈ ಉದ್ಘಾಟಿಸಲಿದ್ದಾರೆ.

అಸೋಸಿಯೇಟ್ ಮೆಡಿಕಲ್ ಡೈರೆಕ್ಟರ್ ಡಾ.ವಿಶಾಲ್ ಯು.ಪಿ ಹಾಗೂ ಮೆಡ್‌ಲ್ಯಾಂಡ್ ಆಸ್ಪತ್ರೆಯ ಚೇರ್‌ಮನ್ ಡಾ.ಅಶ್ರಫ್ ಕಮ್ಮಾಡಿ ಉಪಸ್ಥಿತರಿರಲಿದ್ದಾರೆ. ಅತಿಥಿಗಳಾಗಿ ಡಾ. ಶ್ರೀಲತ ಭಟ್, ಕಡಬ ಪಟ್ಟಣ ಪಂಚಾಯತ್ ಅಧ್ಯಕ್ಷೆ ತಮನ್ನಾ ಜಬೀನ್, ಆರ್ಯಾಪು ಗ್ರಾ.ಪಂ ಅಧ್ಯಕ್ಷೆ ಗೀತಾ, ನೆಟ್ಟಣಿಗೆ ಮುಡೂರು ಗ್ರಾ.ಪಂ ಅಧ್ಯಕ್ಷೆ ಫೌಝಿಯ, ಪುತ್ತೂರು ನಗರಸಭೆ ಮಾಜಿ ಸದಸ್ಯರಾದ ಶೈಲಾ ಪೈ ಹಾಗೂ ಫಾತಿಮತ್ ಝೂಹರ, ಆರ್ಯಾಪು ಗ್ರಾ.ಪಂ ಸದಸ್ಯೆ ರಶೀದಾ.ಬಿ ಮೊದಲಾದವರು ಭಾಗವಹಿಸಲಿದ್ದಾರೆ. ಮೆಡ್‌ಲ್ಯಾಂಡ್ ಆಸ್ಪತ್ರೆಯಲ್ಲಿ ಹೆರಿಗೆ ಮತ್ತು ಪ್ರಸೂತಿ ತಜ್ಞರಾದ ಡಾ.ಆಸಿಯ ಅಫ್ರಾ ಇಸ್ಮಾಯಿಲ್ ಅವರು ಸಂದರ್ಶನಕ್ಕೆ ಲಭ್ಯವಿದ್ದಾರೆ ಎಂದು ಮೆಡ್‌ಲ್ಯಾಂಡ್ ಆಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್ ಅಶ್ಮೀರ್ ಕಮ್ಮಾಡಿ ತಿಳಿಸಿದ್ದಾರೆ.



