ಅಂತಾರಾಷ್ಟ್ರೀಯಕರಾವಳಿ

ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ರಾಜ್ಯ ಗೌರವಾಧ್ಯಕ್ಷ ಮಹಮ್ಮದ್ ಕುಕ್ಕುವಳ್ಳಿಗೆ ‘ಕೆಸಿಎಫ್ ಇನ್‌ಸ್ಪೈರ್ ಪ್ರಶಸ್ತಿ



ಬುರೈದಾ (ಸೌದಿ ಅರೇಬಿಯಾ): ಸಮಾಜಮುಖಿ ಸೇವೆ ಹಾಗೂ ‘ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನ’ದ ಮೂಲಕ ನಾಡು-ನುಡಿಯ ಸೇವೆಗೈಯುತ್ತಿರುವ ಸಾಮಾಜಿಕ ಕಾರ್ಯಕರ್ತ, ಅಭಿಯಾನದ ರಾಜ್ಯ ಗೌರವಾಧ್ಯಕ್ಷರಾದ ಮಹಮ್ಮದ್ ಹಾಜಿ ಕುಕ್ಕುವಳ್ಳಿ ಅವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಸೌದಿ ಅರೇಬಿಯಾದಲ್ಲಿ ಅಂತರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ “ಕೆಸಿಎಫ್ ಅಲ್ ಕಾಸಿಮ್ ಇನ್‌ಸ್ಪೈರ್ ಅವಾರ್ಡ್ 2026” ಪ್ರದಾನ ಮಾಡಿ ಗೌರವಿಸಲಾಯಿತು.


ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ಅಲ್ ಕಾಸಿಮ್ ವಲಯದ ವತಿಯಿಂದ ಸೆ.3 ರಂದು ಬುರೈದಾ ರೆಸಾರ್ಟ್‌ನಲ್ಲಿ ಆಯೋಜಿಸಲಾಗಿದ್ದ ಬೃಹತ್ ‘ಲೆಗಸಿ ನೈಟ್ 2026 – ಫ್ಯಾಮಿಲಿ ಮೀಟ್’ (Legacy Night 2026 – Family Meet) ಕಾರ್ಯಕ್ರಮದಲ್ಲಿ ಈ ಸನ್ಮಾನ ನಡೆಯಿತು.
ವಿವಿಧ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಸಾಮಾಜಿಕ, ಶೈಕ್ಷಣಿಕ ಮುಖಂಡರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!