ಕರಾವಳಿ

ಅಶೋಕ ಜನಮನ: ಗ್ರಾಮ ಗ್ರಾಮಗಳಲ್ಲಿ ಉಡುಗೊರೆ ವಿತರಣೆಗೆ ಶಾಸಕ ಅಶೋಕ್ ರೈ ಚಾಲನೆ

ಪುತ್ತೂರು: ಗ್ರಾಮ ಗ್ರಾಮಕ್ಕೆ ಅಶೋಕ ಜನಮನದ ಉಡುಗೊರೆ ವಿತರಣಾ ಕಾರ್ಯಕ್ರಮಕ್ಕೆ ಶಾಸಕ ಅಶೋಕ್ ರೈ ನ.20ರಂದು ಕೋಡಿಂಬಾಡಿ ಗ್ರಾಮದಲ್ಲಿ ಚಾಲನೆ ನೀಡಿದರು.


ಅ.20ರಂದು ಪುತ್ತೂರು ಶಾಸಕ ಅಶೋಕ್ ರೈ ನೇತೃತ್ವದ ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ದೀಪಾವಳಿ ಪ್ರಯುಕ್ತ ನಡೆದ ಅಶೋಕ ಜನಮನ 2025 ದೀಪಾವಳಿ ವಸ್ತ್ರ ವಿತರಣಾ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾರ್ವಜನಿಕ ಬಂಧುಗಳಿಗೆ ವಸ್ತ್ರ ಹಾಗೂ ಉಡುಗೊರೆಯನ್ನು ನೀಡಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ಹಲವು ಗಣ್ಯರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ನಿರೀಕ್ಷೆಗೂ‌ ಮೀರಿದ ಜನ ಹಾಗೂ ವಿಪರೀತ ಮಳೆಯ ಕಾರಣಕ್ಕೆ ಕಾರ್ಯಕ್ರಮಕ್ಕೆ ಬಂದಿದ್ದ ಹಲವಾರು ಮಂದಿ ಉಡುಗೊರೆ ಪಡೆಯಲು ಸಾಧ್ಯವಾಗದೆ ಮರಳಿದ್ದರು. ಹಲವು ಮಂದಿ ಸುಮಾರು ಹೊತ್ತಿನ ವರೆಗೆ ಕಾದರೂ ಜನಸಂದಣಿಯ ನಡುವೆ ಉಡುಗೋರೆ ಪಡೆಯಲು ಸಾಧ್ಯವಾಗದೆ ಇರುವ ಕಾರಣದಿಂದ ಈ ಉಡುಗೊರೆಯನ್ನು ಪ್ರತೀ ಗ್ರಾಮಕ್ಕೆ ತೆರಳಿ ವಿತರಣೆ ಮಾಡಲು ನಿರ್ಧರಿಸಿದ್ದು ಅದರಂತೆ ಇಂದು ಪ್ರಾರಂಭಿಕ ಹಂತವಾಗಿ ಕೋಡಿಂಬಾಡಿ ಮತ್ತು ಬೆಳ್ಳಿಪ್ಪಾಡಿ ಗ್ರಾಮದಲ್ಲಿ ಉಡುಗೋರೆ ವಿತರಣೆ ನಡೆಯಲಿದೆ.




Leave a Reply

Your email address will not be published. Required fields are marked *

error: Content is protected !!