ದ.ಕ ಜಿಲ್ಲೆಯ ಉಪ್ಪಿನಂಗಡಿ ಪೆರಿಯಡ್ಕದಿಂದ ಜ.30ರಂದು ಕಾಲ್ನಡಿಗೆ ಮೂಲಕ ಪವಿತ್ರ ಮಕ್ಕಾಗೆ ಹೊರಟಿರುವ ನೌಶಾದ್ ಪೆರಿಯಡ್ಕ ಅವರ ಮುರುಡೇಶ್ವರದಿಂದ ಹೊನ್ನಾವರದತ್ತ ಕಾಲ್ನಡಿಗೆ ಯಾತ್ರೆ ಮುಂದುವರಿದಿದೆ.
ಈಗಾಗಲೇ ನೌಶಾದ್ ಅವರು ಕಾಲ್ನಡಿಗೆ ಮೂಲಕ ಸಾಗುತ್ತಿರುವುದನ್ನು ನೋಡಲು ಜನ ಸೇರುತ್ತಿದ್ದು ಅನೇಕ ಮುಖಂಡರು ನೌಶಾದ್ ಅವರನ್ನು ಭೇಟಿಯಾಗಿ ಶುಭ ಹಾರೈಸುತ್ತಿದ್ದಾರೆ.