ಸಿನೆಮಾ

ನಾನು ಅಲ್ಲಾಹನ ಬಳಿ ಕ್ಷಮೆ ಕೇಳುತ್ತೇನೆ
ಬೋಜುಪುರಿ ಸಿನಿಮಾ ನಟಿ ಘೋಷಣೆ




ಪುತ್ತೂರು; ನಾನು ಅಕಸ್ಮಿಕವಾಗಿ ಸಿನಿಮಾ ಕ್ಷೆತ್ರಕ್ಕೆ ಕಾಲಿಟ್ಟೆ ಸಾಕಷ್ಟು ಸಾಧನೆಯನ್ನು ಮಾಡಿದ್ದೇನೆ ಆದರೆ ಈಗ ನಾನು ಸಿನಿಮಾ ಕ್ಷೆತ್ರವನ್ನು ಬಿಟ್ಟು ಇಸ್ಲಾಂನ ತತ್ವದಂತೆ ಜೀವನ ನಡೆಸುತ್ತೇನೆ ನಾನು ಮಾಡಿದ ಪಾಪಕ್ಕಾಗಿ ಅಲ್ಲಾಹನಲ್ಲಿ ಕ್ಷಮೆ ಕೇಳುತ್ತೇನೆ ಎಂದು ಖ್ಯಾತ ಬೋಜಪುರಿ ನಟ ಸಹರಾ ಅಫ್ಸಾ ಹೇಳಿಕೊಂಡಿದ್ದು ಆಕೆ ಸಿನಿಮಾ ಕ್ಷೇತ್ರಕ್ಕೆ ಗುಡ್‌ಬೈ ಹೇಳಿದ್ದಾರೆ.

ಯಾವ ಕಾರಣಕ್ಕೆ ಹಠಾತ್ತನೆ ಬದಲಾಗಿದ್ದಾರೋ ಎಂಬುದು ಗೊತ್ತಿಲ್ಲ. ಸಿನಿಮಾ ಕ್ಷೆತ್ರದಲ್ಲಿ ಸಾಕಷ್ಟು ಸಾಧನೆಯನ್ನು ಮಾಡಿರುವ ಆಕೆ ಬೋಲ್ಡ್ ನಟಿ ಎಂದೇ ಖ್ಯಾತಿಯನ್ನು ಪಡೆದಿದ್ದರು. ತನ್ನ ಮಾಧಕ ಸೌಂದರ್ಯದಿಂದ ಪಡ್ಡೆ ಹುಡುಗರನ್ನು ಆಕರ್ಷಿಸುತ್ತಿದ್ದ ಆಕೆ ಮೈಮಾಟ ಆಕೆಗೆ ಅಭಿಮಾನಿಗಳನ್ನು ಹೆಚ್ಚಿಸುವಂತೆ ಮಾಡಿತ್ತು.

ಬೋಜಪುರಿ ಸಿನಿಮಾ ಕ್ಷೇತ್ರದಲ್ಲಿ ಸಾಕಷ್ಟು ಸಂಪಾದನೆಯನ್ನು ಮಾಡಿರುವ ಆಕೆಗೆ ಕೊನೆಗೆ ತನ್ನ ಧರ್ಮ ಇಸ್ಲಾಂ ನ ತತ್ವ ಸಿದ್ದಾಂತಗಳಂತೆ ಬದುಕಲು ಸಿದ್ದತೆಯನ್ನು ಮಾಡಿಕೊಂಡಿರುವುದು ಬಾಲಿವುಡ್ ಕ್ಷೇತ್ರದ ಅಚ್ಚರಿಗೆ ಕಾರಣವಾಗಿದೆ.

Leave a Reply

Your email address will not be published. Required fields are marked *

error: Content is protected !!