ಪಠಾಣ್ ಚಿತ್ರದಿಂದ ಶಾರೂಕ್ ಖಾನ್’ಗೆ ಎಷ್ಟು ಕೋಟಿ ಹಣ ಸಿಕ್ಕಿದೆ ಗೊತ್ತಾ?
ಪಠಾಣ್ ಚಿತ್ರದ ಅಬ್ಬರ ಎಲ್ಲೆಡೆ ಸದ್ದು ಮಾಡಿತ್ತು. ದಾಖಲೆಗಳನ್ನು ಧೂಳೀಪಟ ಮಾಡಿ ಭರ್ಜರಿ ಕಲೆಕ್ಷನ್ ಕೂಡಾ ಪಡೆದುಕೊಂಡಿದೆ. ಆದರೆ ಚಿತ್ರಕ್ಕಾಗಿ ಶಾರುಖ್ ಖಾನ್ ಅವರು ಸಂಭಾವನೆ ಪಡೆದಿರಲಿಲ್ಲ. ಲಾಭದಲ್ಲಿ ಶೇಕಡ 60ರಷ್ಟು ತಮಗೆ ಸೇರಬೇಕು ಎಂದು ಅವರು ಒಪ್ಪಂದ ಮಾಡಿಕೊಂಡಿದ್ದರು.
ಅದರಿಂದ ಶಾರುಖ್ ಖಾನ್ ಗೆ ಭರ್ಜರಿ ಲಾಭವಾಗಿದೆ. ಬಂಡವಾಳ ಕಳೆದು, ಭಾರತ ಹಾಗೂ ವಿದೇಶದಲ್ಲಿ ಸಿನಿಮಾವನ್ನು ವಿತರಣೆ ಮಾಡಿದವರ ಪಾಲೆಲ್ಲಾ ಕಳೆದು ಯಶ್ ರಾಜ್ ಸಂಸ್ಥೆಗೆ ಅಂದಾಜು 333 ಕೋಟಿ ರೂಪಾಯಿ ಲಾಭ ಆಗಿದೆ. ಅದರಲ್ಲಿ ಶೇಕಡ 60 ಅಂದರೆ ಸುಮಾರು 200 ಕೋಟಿ ರೂಪಾಯಿಯನ್ನು ಶಾರುಖ್ ಖಾನ್ ತಮ್ಮ ಜೇಬಿಗೆ ಇಳಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.