ಉಪ್ಪಿನಂಗಡಿ: ಸೈಯ್ಯದ್ ಇಬ್ರಾಹಿಂ ತಂಙಳ್ ಅರೆಸ್ಟ್
ಮಂಗಳೂರು: ನಿಷೇದಿತ ಪಿ.ಎಫ್.ಐ ಸಂಘಟನೆಯ ಪರ ಸಾಮಾಜಿಕ ಜಾಲತಾಣವಾದ ವಾಟ್ಸ್ ಆಪ್ ಗ್ರೂಪ್ ನಲ್ಲಿ ಪೋಸ್ಟ್ ಪ್ರಕಟಿಸಿರುವ ಆರೋಪದಲ್ಲಿ ಉಪ್ಪಿನಂಗಡಿ ಸಮೀಪದ ರಾಮಕುಂಜ ಗ್ರಾಮದ ಸೈಯ್ಯದ್ ಇಬ್ರಾಹಿಂ ತಂಙಳ್(55) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣವಾದ ವಾಟ್ಸ್ ಆಪ್ ಗ್ರೂಪ್ ನಲ್ಲಿ ಕೇಂದ್ರ ಸರಕಾರದಿಂದ ನಿಷೇಧಕ್ಕೊಳಗಾದ Popular Front of India (PFI) ಸಂಘಟನೆಯ ಪರವಾಗಿ ಪೋಸ್ಟ್ ಪ್ರಕಟಿಸಿ, ಸದ್ರಿ ಸಂಘಟನೆಯ ಬಗ್ಗೆ ಸ್ವಯಂ ಪ್ರೇರಿತನಾಗಿ ಪ್ರಚಾರ ಮಾಡಿ ಅಪರಾಧಿಕ ಬಲ ಪ್ರದರ್ಶನದ ಮೂಲಕ ಆತಂಕ ಉಂಟು ಮಾಡಿದ ಕೃತ್ಯವೆಸಗಿದ್ದರಿಂದ, ಪಿ.ಎಸ್.ಐ ರವರು ಸಲ್ಲಿಸಿರುವ ದೂರನ್ನು ಆಧಾರಿಸಿ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಅ.ಕ್ರ.113/2025 U/s 10 (a), (i), 13, 18 UAPA ಆಕ್ಟ್ ರಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಅ.9ರಂದು ಆರೋಪಿಯನ್ನು ಮಂಗಳೂರು ನಗರದ ಉರ್ವ ಸ್ಟೋರ್ ಬಳಿಯಿಂದ ವಶಕ್ಕೆ ಪಡೆದು ದಸ್ತಗಿರಿ ಮಾಡಿದ್ದು, ವಶದಲ್ಲಿದ್ದ ಮೋಬೈಲ್ ಫೋನ್ ನ್ನು ಅಮಾನತ್ತು ಪಡಿಸಿಕೊಂಡು ತನಿಖೆಗೆ ಒಳಪಡಸಿರುತ್ತದೆ. ಅ. 10ರಂದು ಆರೋಪಿಯನ್ನು 49ನೇ ಹೆಚ್ಚುವರಿ ಸಿವಿಲ್ ಮತ್ತು ಸತ್ರ ನ್ಯಾಯಾಲಯ (CCH-50) ಮತ್ತು ಎನ್.ಐ.ಎ. ಪ್ರಕರಣಗಳ ವಿಶೇಷ ನ್ಯಾಯಾಲಯ ಬೆಂಗಳೂರು ಇಲ್ಲಿಗೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಯನ್ನು ದಿನಾಂಕ ಅ.24ರ ವರೆಗೆ ನ್ಯಾಯಾಂಗ ವಶಕ್ಕೆ ನೀಡಿದೆ.



