ಮೌಂಟನ್ ವ್ಯೂ ಅಸ್ವಾಲಿಹಾ ಕಾಲೇಜು, ದಾರುಲ್ ಫಲಾಹ್ ಮದ್ರಸ ವಿದ್ಯಾರ್ಥಿಗಳ ವಾರ್ಷಿಕ ಕಲಾ ಪ್ರತಿಭಾ ಕಾರ್ಯಕ್ರಮ ಸಮಾರೋಪ
ಪುತ್ತೂರು: ಸಾಲ್ಮರ ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆಗಳ ಅಧೀನದ ಅಸ್ವಾಲಿಹಾ ವುಮೆನ್ಸ್ ಕಾಲೇಜ್ ವಿದ್ಯಾರ್ಥಿನಿಯರು ಮತ್ತು ದಾರುಲ್ ಫಲಾಹ್ ಮದ್ರಸ ವಿದ್ಯಾರ್ಥಿಗಳ ವಾರ್ಷಿಕ ಕಲಾ ಪ್ರತಿಭಾ ಕಾರ್ಯಕ್ರಮದ ಸಮಾರೋಪ ಸಮಾರಂಭ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಯು. ಮುಹಮ್ಮದ್ ಹಾಜಿಯವರು ಪ್ರವಾದಿಯವರ ಸಂದೇಶವು ಸಾರ್ವಕಾಲಿಕವಾಗಿದ್ದು ಅದನ್ನು ಪ್ರತಿಯೊಬ್ಬರೂ ಬದುಕಲ್ಲಿ ಅಳವಡಿಸಿ ಕೊಳ್ಳಬೇಕೆಂದು ಹೇಳಿದರು. ಸಂಸ್ಥೆಯ ಸಂಚಾಲಕರಾದ ಹಾಜಿ ಮುಹಮ್ಮದ್ ಸಾಬ್ ಕಾರ್ಯಕ್ರಮ ಉದ್ಗಾಟಿಸಿ ಪ್ರವಾದಿಯವರ ಮಾದರಿ ಬದುಕು ಬೋಧನೆಯ ಬಗ್ಗೆ ವಿವರಿಸಿದರು. ಸಂಸ್ಥೆಯ ಉಪಾಧ್ಯಕ್ಷ ಹಾಜಿ ಅಬ್ದುಲ್ ರಹಿಮಾನ್ ಅಝಾದ್, ಕೋಡಿಂಬಾಡಿ ಜುಮ್ಮಾ ಮಸೀದಿ ಅಧ್ಯಕ್ಷ ಉಮರ್ ಹಾಜಿ ಕೋಡಿಂಬಾಡಿ, ಉದ್ಯಮಿಗಳಾದ ಬಶೀರ್ ಹಾಜಿ ದಾರಂದಕುಕ್ಕು, ಹುಸೈನ್ ಹಾಜಿ ಕೆ.ಬಿ.ಕೆ.ಕೋಡಿಂಬಾಡಿ, ಝಕರಿಯಾ ಮಾಂತೂರು ಮೊದಲಾದವರು ಶುಭ ಹಾರೈಸಿದರು.
ಶಾಲಾ ದೈಹಿಕ ಶಿಕ್ಷಕ ಅಶ್ರಫ್, ಕಾರ್ಯಾಲಯ ನಿರ್ವಾಹಕರಾದ ಯೂಸುಫ್ ಕೂಟತ್ತಾನ ಮತ್ತು ಅಬ್ದುಲ್ ಹಮೀದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಮೌಂಟನ್ ವ್ಯೂ ದಾರುಲ್ ಫಲಾಹ್ ಮದ್ರಸ ವಿದ್ಯಾರ್ಥಿಗಳಿಂದ ವಿವಿಧ ಸಾಹಿತ್ಯ ಕಲಾ ಸ್ಪರ್ಧಾ ಕಾರ್ಯಕ್ರಮ ನಡೆಯಿತು. ಕಾಲೇಜಿನ ಸಭಾಂಗಣದಲ್ಲಿ ಉಪನ್ಯಾಸಕಿಯರ ನೇತೃತ್ವದಲ್ಲಿ ಅಸ್ವಾಲಿಹಾ ವುಮೆನ್ಸ್ ಕಾಲೇಜ್ ವಿದ್ಯಾರ್ಥಿನಿಯರ 15 ದಿನಗಳ ಕಾಲ ನಡೆದ ಗ್ಲೋ-25 ವಾರ್ಷಿಕ ಸ್ಪರ್ಧಾ ಕಾರ್ಯಕ್ರಮದಲ್ಲಿ ಅವೆಂಚೂರ ತಂಡ ಪ್ರಥಮ ಸ್ಥಾನ ಮತ್ತು ಫಿಯೋರ್ಝಾ ತಂಡ ದ್ವಿತೀಯ ಸ್ಥಾನವನ್ನೂ ಪಡೆಯಿತು.
ಪ್ರತಿಭಾ ಪ್ರದರ್ಶನದಲ್ಲಿ ಭಾಗವಹಿಸಿದ ಹಾಗೂ ವಿವಿಧ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಟ್ರೋಫಿ ಮತ್ತು ವಿವಿಧ ಬಹುಮಾನಗಳನ್ನು ಉದ್ಯಮಿಗಳಾದ ಉಮರ್ ಹಾಜಿ ಕೋಡಿಂಬಾಡಿ, ಬಶೀರ್ ಹಾಜಿ ದಾರಂದಕುಕ್ಕು ಮತ್ತು ಹುಸೈನ್ ಹಾಜಿ ಕೆ.ಬಿ.ಕೆ.ಕೋಡಿಂಬಾಡಿ ಅವರು ವಿತರಿಸಿದರು. ಸಂಸ್ಥೆಯ ಎಲ್ಲಾ ಶಿಕ್ಷಕ ವೃಂದ, ಶಿಕ್ಷಕೇತರ ವೃಂದದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕೆ.ಎಂ.ಎ. ಕೊಡುಂಗಾಯಿ ಫಾಝಿಲ್ ಹನೀಫಿ ಸ್ವಾಗತಿಸಿದರು. ಶಾಲಾ ಶಿಕ್ಷಕ ರವೂಫ್ ಮತ್ತು ಮದ್ರಸ ಶಿಕ್ಷಕ ನಝೀರ್ ಅರ್ಶದಿ ವಿವಿಧ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು..





