ಕರಾವಳಿ

ಬಿಗ್ ಬಾಸ್’ನಲ್ಲಿ ಡ್ರೋಣ್ ಪ್ರತಾಪ್ ಸೋತಿದ್ದಕ್ಕೆ ಕಡಬದ ಈ ಯುವಕ ಮಾಡಿದ್ದೇನು ಗೊತ್ತಾ..?



ಕಡಬ: ಬಿಗ್ ಬಾಸ್ ಸೀಸನ್ 10 ರಲ್ಲಿ ಡ್ರೋಣ್ ಪ್ರತಾಪ್ ಸೋತಿದ್ದಕ್ಕೆ ಕಡಬದ ಯುವಕನೋರ್ವ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದಾರೆ. ಕಡಬದ ಝೈನುಲ್ ಆಬಿದ್ ಎಂಬ ಯುವಕ ಡ್ರೋಣ್ ಪ್ರತಾಪ್ ಸೋತಿದ್ದಕ್ಕೆ ಅರ್ಧ ಗಡ್ಡ, ಮೀಸೆ ತೆಗೆದು ಇದೀಗ ವೈರಲ್ ಆಗಿದ್ದಾರೆ.

ಕಡಬ ತಾಲೂಕಿನ ಬಂಟ್ರ ಗ್ರಾಮದ ಪಾಲೆತ್ತಡ್ಕ ನಿವಾಸಿ ಝೈನುಲ್ ಆಬಿದ್ ಅವರು ಈ ಬಾರಿಯ ಬಿಗ್ ಬಾಸ್ ಸೀಸನ್‌ನಲ್ಲಿ ಡ್ರೋಣ್ ಪ್ರತಾಪ್ ವಿನ್ನರ್ ಆಗಿ ಹೊರಬರಲಿದ್ದಾರೆ. ಪ್ರತಾಪ್ ಒಂದು ವೇಳೆ ಸೋತರೆ ಅರ್ಧ ಗಡ್ಡ, ಮೀಸೆ ತೆಗೆಯುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಚಾಲೆಂಜ್ ಹಾಕಿ ವೀಡಿಯೋ ಶೇರ್ ಮಾಡಿದ್ದರು. ಅಲ್ಲದೇ ಹಸಿ ಮೆಣಸಿನಕಾಯಿ ತಿನ್ನುವುದಾಗಿಯೂ ವೀಡಿಯೋ ಹರಿಯಬಿಟ್ಟಿದ್ದರು.

ಇದೀಗ ಬಿಗ್ ಬಾಸ್‌ನಲ್ಲಿ ಕಾರ್ತಿಕ್ ವಿನ್ನರ್ ಆಗಿ ಹೊರ ಬಂದಿದ್ದು, ಪ್ರತಾಪ್ ರನ್ನರ್ ಅಪ್ ಆಗಿದ್ದಾರೆ. ಫಲಿತಾಂಶ ಹೊರ ಬರುತ್ತಲೇ ಆಬಿದ್ ತಾನು ಹಾಕಿದ ಚಾಲೆಂಜ್‌ನಂತೆ ಅರ್ಧ ಗಡ್ಡ ಮೀಸೆ ಬೋಳಿಸಿಕೊಂಡು ಹಸಿ ಮೆಣಸಿನಕಾಯಿ ತಿಂದು ವೀಡಿಯೋ ಮಾಡಿ ಅಪ್ಲೋಡ್ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!