ಸುಳ್ಯ: ಅಡಿಕೆ ಕಳ್ಳತನ ಮಾಡಿದ ಆರೋಪಿಗಳಿಬ್ಬರ ಬಂಧನ
ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಅಜ್ಜಾವರ ಪೇಟೆಯಲ್ಲಿರುವ ದಿನಸಿ ಅಂಗಡಿ ಮಾಲಕರಾದ ಮಹಮ್ಮದ್ ರಫೀಕ್ ಎಸ್ ಡಿ ರವರ ಅಡಿಕೆ ಸಂಗ್ರಹಿಸುವ ಗೋಡಾನ್‌ನಿಂದ ದಿನಾಂಕ:12.09.2025ರಂದು ರಾತ್ರಿ ಅಡಿಕೆಯನ್ನು ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಾಲಾಗಿತ್ತು.


ಈ ಬಗ್ಗೆ ತನಿಖೆ ನಡೆಸಲಾಗಿ ಪ್ರಕರಣದಲ್ಲಿ ಆರೋಪಿಗಳಾದ
ಸುಪ್ರಿತ್ ಕೆ(22) ಮಂಡೆಕೋಲು ಗ್ರಾಮ ಸುಳ್ಯ ತಾಲೂಕು ಹಾಗೂ ಮಹಮ್ಮದ್ ಸಿನಾನ್(21ವರ್ಷ) ಜಾಲ್ಸೂರು ಗ್ರಾಮ ಸುಳ್ಯ ತಾಲೂಕು ಎಂಬಿಬ್ಬರನ್ನು 19.09.2025ರಂದು ಸುಳ್ಯ ತಾಲೂಕು ಮಂಡೆಕೋಲು ಗ್ರಾಮ ಮುರೂರು ಚೆಕ್ ಪೋಸ್ಟ್ ಬಳಿ ವಶಕ್ಕೆ ಪಡೆದು ಆರೋಪಿಗಳು ಕಳವು ಮಾಡಿದ 1 ಕ್ವಿಂಟಲ್ ಸುಲಿದ ಅಡಿಕೆ ಸಾಗಾಟ ಮಾಡಲು ಉಪಯೋಗಿಸಿರುವ ಆಟೋ ರಿಕ್ಷಾವನ್ನು ಸ್ವಾದೀನಪಡಿಸಿಕೊಂಡು ಆರೊಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.