ಕರಾವಳಿರಾಜ್ಯ

ಪುತ್ತೂರು, ಉಪ್ಪಿನಂಗಡಿ ದೇವಸ್ಥಾನ ಅಭಿವೃದ್ದಿ ಬಗ್ಗೆ ಮುಜರಾಯಿ ಖಾತೆ ಸಚಿವರ ಜೊತೆ ಶಾಸಕ ಅಶೋಕ್ ರೈ  ಮಾತುಕತೆ

ಪುತ್ತೂರು: ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹಾಗೂ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಅಭಿವೃದ್ದಿ ಕಾರ್ಯಗಳ ಬಗ್ಗೆ ಮುಜರಾಯಿ ಖಾತೆ ಸಚಿವ ರಾಮಲಿಂಗಾ ರೆಡ್ಡಿಯವರ ಜೊತೆ ಶಾಸಕ ಅಶೋಕ್ ರೈ ಅವರು ಶುಕ್ರವಾರ ಮಾತುಕತೆ ನಡೆಸಿದರು.


ಪುತ್ತೂರು ದೇವಳದ ಅಭಿವೃದ್ದಿಗೆ ಈಗಾಗಲೇ ಮಾಸ್ಟರ್ ಪ್ಲಾನ್ ಸಿದ್ದಗೊಂಡಿದ್ದು ,ಅಭಿವೃದ್ದಿ ಕಾರ್ಯಗಳಿಗೆ ಸಂಬಂಧಿಸಿದ ಅನುದಾನ ಹಾಗೂ ಮುಜರಾಯಿ ಇಲಾಖೆಯಿಂದ ನೆರವಿನ ಬಗ್ಗೆ ಸಚಿವರ ಜೊತೆ ಚರ್ಚೆ ನಡೆಸಿದರು. ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನವು ಸುಮಾರು‌ 352 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ದಿಯಾಗಲಿದ್ದು ಇದರ ಮಾಸ್ಟರ್ ಪ್ಲಾನ್ ಸಿದ್ದಗೊಂಡಿರುವ ಬಗ್ಗೆ ಸಚವರಿಗೆ ಮಾಹಿತಿ ನೀಡಲಾಯಿತು.

ದೇವಸ್ಥಾನಕ್ಕೆ ಜಾಗ ಖರೀದಿ ಮಾಡಬೇಕಿದ್ದು ಇದಕ್ಕೆ ಇಲಾಖೆಯ ಅನುಮತಿ ಬಗ್ಗೆಯೂ ಸಚಿವರ‌ ಗಮನಕ್ಕೆ ತರಲಾಯಿತು. ಎರಡೂ ದೇವಸ್ಥಾನಗಳ ಅಭಿವೃದ್ದಿ ಕಾರ್ಯಗಳು ನಡೆಯುವ ಬಗ್ಗೆ ಸಚಿವರಿಗೆ ವಿವರಣೆಯನ್ನು ನೀಡಲಾಯಿತು. ಈ ವೇಳೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಸದಸ್ಯರಾದ ವಿನಯಾ, ಸುಬಾಸ್, ಜಿಲ್ಲಾ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಮುರಳೀದರ್ ರೈ ಮಟಂತಬೆಟ್ಟು ಇದ್ದರು.

Leave a Reply

Your email address will not be published. Required fields are marked *

error: Content is protected !!