ಸರಕಾರದ ಸೌಲಭ್ಯ ಕೊಡುವಲ್ಲಿ ಸತಾಯಿಸಿಬೇಡಿ: ಶಾಸಕ ಅಶೋಕ್ ರೈ ಎಚ್ಚರಿಕೆ
ಪುತ್ತೂರು: ನಾನು ವೃದ್ದಾಪ್ಯ ವೇತನಕ್ಕೆ ಅರ್ಜಿ ಸಲ್ಲಿಸಿ ಕೆಲವು ತಿಂಗಳುಗಳು ಕಳೆದಿದ್ದು ನನ್ನ ಅರ್ಜಿಯನ್ನು ಗ್ರಾಮಕರಣಿಕ ಮಾನ್ಯ ಮಾಡುತ್ತಿಲ್ಲ ಎಂದು ವ್ಯಕ್ತಿಯೋರ್ವರು ಶಾಸಕರಿಗೆ ಸೋಮವಾರ ದೂರು ನೀಡಿದ್ದಾರೆ.

ಪಾಣಾಜೆ ಗ್ರಾಮದ ವಿಶ್ವನಾಥ ರೈ ಅಂಗಡಿಮಜಲು ದೂರು ನೀಡಿದವರು. ಇವರು ಕಳೆದ ಕೆಲವು ತಿಂಗಳ ಹಿಂದೆ ವೃದ್ದಾಪ್ಯ ವೇತನಕ್ಕೆ ಅರ್ಜಿ ಹಾಕಿದ್ದರು. ಇವರು ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿದ್ದರು ಇವರಿಗೆ ಅಲ್ಪ ಕೃಷಿ ತೋಟ ಇದೆ ಎಂದು ಗ್ರಾಮಕರಣಿಕ ಅರ್ಜಿಯನ್ನು ತಿರಸ್ಕಾರ ಮಾಡಿದ್ದರು. ಈ ಬಗ್ಗೆ ಶಾಸಕರಿಗೆ ದೂರು ನೀಡಿದ್ದರು. ಈ ಬಗ್ಗೆ ಗ್ರಾಮಕರಣಿಕಗೆ ಕರೆ ಮಾಡಿದ ಶಾಸಕರು ” ಏನೋ ನಾಲ್ಕು ಅಡಿಕೆ ಮರ ಇದೆ ಎಂಬ ಮಾತ್ರಕ್ಕೆ ಅರ್ಜಿದಾರರೇನು ಶ್ರೀಮಂತರ? ಇವರಿಗೆ ಗಂಡು ಮಕ್ಕಳೂ ಇಲ್ಲ, ಯಾವ ಕಾರಣಕ್ಕೆ ಇವರ ಅರ್ಜಿಯನ್ನು ತಿರಸ್ಕಾರ ಮಾಡಿದ್ದೀರಿ? ಅರ್ಜಿದಾರರಿಗೆ ಪಿಂಚಣಿ ಕೊಡುವುದು ಸರಕಾರ,ನಿಮ್ಮ ಕೈಯಿಂದ ಕೊಡುವುದಲ್ಲ, ಸರಕಾರದ ಸೌಲಭ್ಯ ವನ್ನು ತಪ್ಪಿಸುವ ಕೆಲಸಮಾಡಿ ಎಂದುಎಚ್ಚರಿಕೆಯನ್ನು ನೀಡಿದ್ದಾರೆ.