ಸಾಲ್ಮರ ಮೌಂಟನ್ ವ್ಯೂ ಅಸ್ವಾಲಿಹಾ ವುಮೆನ್ಸ್ ಕಾಲೇಜ್ ನಲ್ಲಿ ‘ಗ್ಲೋ-25’ ಆರ್ಟ್ಸ್ ಫೆಸ್ಟ್, ಲೋಗೋ ಅನಾವರಣ
ಪುತ್ತೂರು: ಬದುಕಲ್ಲಿ ಸಾಧಿಸುವ ಕನಸು, ಛಲ ಹೊಂದಿರಬೇಕು, ಈ ನಿಟ್ಟಿನಲ್ಲಿ ಶಿಕ್ಷಣವು ವಿದ್ಯಾರ್ಥಿಗಳ ಕನಸುಗಳನ್ನು ಸಾಕಾರಗೊಳಿಸುವಲ್ಲಿ ಶಕ್ತಿ ತುಂಬುತ್ತದೆ, ಅದೇ ರೀತಿ ಲೌಕಿಕ ಶಿಕ್ಷಣದ ಜೊತೆಗೆ ಧಾರ್ಮಿಕ ಮೌಲ್ಯಗಳು ಸೇರಿ ಕೊಂಡಾಗ ಜೀವನ ಕೂಡ ಅರ್ಥಪೂರ್ಣವಾಗುತ್ತದೆ ಎಂದು ಎಜ್ಯುಕೇಷನಲ್ ಎಕ್ಸೆಲೆನ್ಸ್ ಫೌಂಡೇಶನ್ ಇದರ ಅಧ್ಯಕ್ಷ ಅಮ್ಜದ್ ಖಾನ್ ಪೋಳ್ಯ ಹೇಳಿದರು.
ಅವರು ಸಾಲ್ಮರ ಮೌಂಟನ್ ವ್ಯೂ ಅಸ್ವಾಲಿಹಾ ವುಮೆನ್ಸ್ ಕಾಲೇಜ್ ನಲ್ಲಿ ವಿದ್ಯಾರ್ಥಿನಿಯರ ಮೀಲಾದ್ ಆರ್ಟ್ಸ್ ಫೆಸ್ಟ್ ನ ‘ಗ್ಲೋ-25’ ಲೋಗೋವನ್ನು ಅನಾವರಣ ಗೊಳಿಸಿ ಮಾತನಾಡಿದರು.
ಮಹಿಳೆಯರು ವಿದ್ಯೆಯ ಜೊತೆಗೆ ಪ್ರತಿಭಾ ಕೌಶಲಗಳನ್ನು ಹೊಂದಿದರೆ ಅವರಿಗೆ ವಯಕ್ತಿಕ ಸಾಧನೆಯ ಜೊತೆಗೆ ಕುಟುಂಬದಲ್ಲಿ ಮೌಲ್ಯ, ಜ್ಞಾನ ಮತ್ತು ಕೌಶಲಗಳನ್ನು ಬೆಳೆಸಲು ಸಾಧ್ಯವಾಗುತ್ತದೆ, ಈ ನಿಟ್ಟಿನಲ್ಲಿ ಅಸ್ವಾಲಿಹಾ ವುಮೆನ್ಸ್ ಕಾಲೇಜ್ ವಿದ್ಯಾರ್ಥಿನಿಯರಿಗೆ ಸಮನ್ವಯ ಶಿಕ್ಷಣದ ಜೊತೆಗೆ ಪ್ರತಿಭಾ ಕಾರ್ಯಕ್ರಮಗಳ ಮೂಲಕ ಪ್ರೋತ್ಸಾಹ ನೀಡುತ್ತಿರುವುದು ಅಭಿನಂದರ್ಹ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾಜಿ ಪಡೀಲ್ ಅವರು, ಶಿಕ್ಷಣದ ಜೊತೆಗೆ ಶಿಸ್ತು ಕೂಡ ಅಗತ್ಯ, ಇಲ್ಲಿನ ಸಮನ್ವಯ ಶಿಕ್ಷಣ ವಿದ್ಯಾರ್ಥಿನಿಯರಲ್ಲಿ ವಿದ್ಯೆಯೊಂದಿಗೆ ಶಿಸ್ತನ್ನು ಬೆಳೆಸುತ್ತದೆ. ಜೊತೆಗೆ ಇಲ್ಲಿನ ವಿದ್ಯಾರ್ಥಿನಿಯರು ಶಿಕ್ಷಣದ ಜೊತೆಗೆ ಪ್ರತಿಭಾ ಕಾರ್ಯಕ್ರಮ ಗಳಲ್ಲೂ ಉತ್ತಮ ಸಾಧನೆ ಮಾಡಿರುವುದು ಗಮನಾರ್ಹ ವಾಗಿದೆ ಎಂದರು. ಸಮಾರಂಭದಲ್ಲಿ ಪುತ್ತೂರು ರೇಂಜ್ ಮುಸಾಬಕ ಸ್ವಾಗತ ಸಮಿತಿ ಅಧ್ಯಕ್ಷ ಉಮರ್ ಹಾಜಿ ಕೋಡಿಂಬಾಡಿ, ಉಪಾಧ್ಯಕ್ಷ ಬಶೀರ್ ಹಾಜಿ ದಾರಂದಕುಕ್ಕು, ಉದ್ಯಮಿ ಇರ್ಶಾದ್ ಇಂಜಿನಿಯರ್ ವಿಟ್ಲ, ಮೌಂಟನ್ ವ್ಯೂ ಸಂಸ್ಥೆಯ ಉಪಾಧ್ಯಕ್ಷ ಹಾಜಿ ಅಬ್ದುಲ್ ರಹಿಮಾನ್ ಅಝಾದ್ ದರ್ಬೆ, ಸಂಚಾಲಕ ಮುಹಮ್ಮದ್ ಸಾಬ್ ಹಾಜಿ, ಮದ್ರಸ ಅಧ್ಯಾಪಕ ನಝೀರ್ ಅರ್ಶದಿ ಮೊದಲಾದವರು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಲೋಗೋ ಮತ್ತು ಟೀಮ್ ಬೋರ್ಡ್ ಗಳನ್ನು ಅನಾವರಣಗೊಳಿಸಲಾಯಿತು. ಸಂಸ್ಥೆಯ ಕಾರ್ಯಾಲಯ ನಿರ್ವಾಹಕ ಯೂಸುಫ್ ಮತ್ತು ಹಮೀದ್ ಉಪಸ್ಥಿತರಿದ್ದರು. ಕೆ.ಎಂ.ಎ.ಕೊಡುಂಗಾಯಿ ಫಾಝಿಲ್ ಹನೀಫಿ ಸ್ವಾಗತಿಸಿ ಪ್ರಸ್ತಾವನೆಗೈದರು. ಶಾಲಾ ಶಿಕ್ಷಕ ರವೂಫ್ ವಿವಿಧ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ಪ್ರಾರ್ಥನಾ ಸಂಗಮ: ಸಭಾ ಕಾರ್ಯಕ್ರಮದ ಬಳಿಕ ಕಾಲೇಜ್ ನ ಉಪನ್ಯಾಸಕಿಯರ ನೇತೃತ್ವದಲ್ಲಿ ವಿದ್ಯಾರ್ಥಿನಿಯರಿಂದ ಮೀಲಾದ್ ಪ್ರಯುಕ್ತ ಮೌಲಿದ್, ಪ್ರಾರ್ಥನಾ ಸಂಗಮ ನಡೆಯಿತು .





