ಮಂಗಳೂರು: ಚೂರಿ ಇರಿತ, ನಾಲ್ವರ ವಿರುದ್ದ ಪ್ರಕರಣ ದಾಖಲು
ಮಂಗಳೂರು: ಸುರತ್ಕಲ್‌ನ ದೀಪಕ್ ಬಾರ್ ಬಳಿ ಮುಸ್ಲಿಂ ವ್ಯಕ್ತಿಯೊಬ್ಬರಿಗೆ ಚೂರಿ ಇರಿದ ಘಟನೆ ಅ.23 ರಂದು ರಾತ್ರಿ ವರದಿಯಾಗಿದೆ. ಮುಕ್ಷಿದ್ , ನಿಜಾಮ್ ಮತ್ತು ಇತರ ಇಬ್ಬರು ಬಾರ್‌ಗೆ ಹೋಗಿ ಮದ್ಯ ಸೇವಿಸುತ್ತಿದ್ದರು ಈ ಸಂದರ್ಭ ಅಲ್ಲಿದ್ದ ನಾಲ್ಕು ಜನರ ತಂಡದ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ.

ಈ ವೇಳೆ ಓರ್ವ ಮುಕ್ಷಿದ್ ಹೊಟ್ಟೆಯ ಮತ್ತು ಕಿವಿಯ ಭಾಗಕ್ಕೆ ಫ್ಲೆಕ್ಸ್ ಕಟ್ ಮಾಡಲು ಬಳಸುವ ಚಾಕುವಿನಿಂದ ಇರಿದಿದ್ದಾನೆ ಈ ಸಂದರ್ಭ ನಿಜಾಮ್ ನ ಕೈಗೂ ಗಾಯಗಳಾಗಿವೆ.
ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆ ಯಲ್ಲಿ ನಾಲ್ವರ ವಿರುದ್ಧ 307 ಪ್ರಕರಣ ದಾಖಲಾಗಿದೆ. ಗಾಯಾಳುಗಳ ಮಾಹಿತಿ ಪ್ರಕಾರ ಹಲ್ಲೆ ಮಾಡಿದವರನ್ನು ಗುರುರಾಜ್ , ಅಲೆಕ್ಸ್ ಸಂತೋಷ್ ಸುಶಾಂತ್,ನಿತಿನ್ ಎಂದು ಗುರುತಿಸಲಾಗಿದೆ. ಸದ್ಯ ಆರೋಪಿಗಳು ಪರಾರಿಯಾಗಿದ್ದು ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.





