ಕರಾವಳಿರಾಜ್ಯ

ಧರ್ಮಸ್ಥಳ ಪ್ರಕರಣ: ಎಸ್.ಐ.ಟಿ ತನಿಖೆಯಿಂದ ಎಲ್ಲ ಗೊಂದಲಗಳಿಗೂ ತೆರೆ ಬೀಳಲಿದೆ

ಬೆಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ಎಸ್.ಐ.ಟಿ ತನಿಖೆ ನಡೆಯುತ್ತಿದ್ದು ತನಿಖೆಯಿಂದ ಎಲ್ಲ ಗೊಂದಲಗಳಿಗೂ ತೆರೆ ಬೀಳಲಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

ಆ.14ರಂದು ವಿಧಾನ ಸಭಾ ಅಧಿವೇಶನದಲ್ಲಿ ಮಾತನಾಡಿದ ಅಶೋಕ್ ರೈಯವರು ಧರ್ಮಸ್ಥಳ ವಿಚಾರದಲ್ಲಿ ನಮ್ಮ ಸರಕಾರ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದು ಜನರಲ್ಲಿರುವ ಗೊಂದಲಗಳನ್ನು ದೂರ ಮಾಡುವ ಸಲುವಾಗಿ ಎಸ್.ಐ.ಟಿ ತನಿಖೆಗೆ ವಹಿಸಿದೆ, ಎಸ್.ಐ.ಟಿ ತನಿಖೆಯನ್ನು ಧರ್ಮಸ್ಥಳದವರು ಸೇರಿದಂತೆ ಎಲ್ಲರೂ ಸ್ವಾಗತಿಸಿದ್ದಾರೆ ಎಂದು ಅವರು ಹೇಳಿದರು. ನಮ್ಮ ಸರಕಾರ ಯಾರ ಪರ-ವಿರೋಧ ಮಾಡಿಲ್ಲ, ನ್ಯಾಯಯುತ ತನಿಖೆಗೆ ವಹಿಸಿದೆ, ಧರ್ಮಸ್ಥಳದ ಭಕ್ತಾದಿಗಳ ಗೊಂದಲಕ್ಕೆ ತೆರೆ ಎಳೆಯುವ ಕೆಲಸವನ್ನು ಸರಕಾರ ಮಾಡಿದ್ದು ಇದರಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ಅವರು ಹೇಳಿದರು. ಮುಂದಿನ ದಿನಗಳಲ್ಲಿ ತನಿಖೆ ಪೂರ್ತಿಯಾಗಲಿದ್ದು ತನಿಖೆಯ ಬಳಿಕ ಎಲ್ಲ ಗೊಂದಲಗಳೂ ದೂರವಾಗಲಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!